ಚಂದವ್ವ  
ರಾಯಚೂರು

ಜಗಳ ತಾಯಿ ಕೊಲೆಯಲ್ಲಿ ಅಂತ್ಯ

ಶಾಮಸುಂದರ್ ಕೊಪ್ಪಳಕರ್
ಮುದಗಲ್: ಸಮೀಪದ ಜ್ಕಕೇರಮಡು ತಾಂಡಾದ ಮನೆಯೊಂದರಲ್ಲಿ ಸೋಮವಾರ ಉಂಟಾದ ಜಗಳ, ತಾಯಿ ಕೊಲೆಯಲ್ಲಿ ಅಂತ್ಯವಾಗಿದೆ.
ಚಂದವ್ವ ಬೂದೆಪ್ಪ (45) ಮೃತೆ. ಕುಮಾರ್ ಬೂದೆಪ್ಪ ಕೊಲೆ ಮಾಡಿದ ಪುತ್ರ. ಸೋಮವಾರ ಸಂಜೆ ಕುಡಿದು ಮನೆಗೆ ಬಂದ ಕುಮಾರ್, ತಾಯಿ ಹಾಗೂ ತಮ್ಮ ಸಂತೋಷ್ ಜತೆ ಜಗಳ ತೆಗೆದಿದ್ದಾನೆ. ಈ ವೇಳೆ ಕುಮಾರ್ ತಳ್ಳಿದ್ದರಿಂದ ತಾಯಿ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.