ದೇವದುರ್ಗದಲ್ಲಿ ತಾಲೂಕು ಕಚೇರಿ ಮುಂದೆ ಪ್ರಾಂತ ರೈತ ಸಂಘ ಪ್ರತಿಭಟನೆ ನಡೆಸಿತು. ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಕಾರ್ಯದರ್ಶಿ ಮೌನೇಶ, ಶಬ್ಬೀರ್ ಜಾಲಹಳ್ಳಿ, ದಾವಲ್ ಸಾಬ್ ಇತರರಿದ್ದರು.
ದೇವದುರ್ಗ: ಹಿರೇಬೂದೂರು ಗ್ರಾಮದಲ್ಲಿ ರೈತ ಮಹಮ್ಮದ್ ಸಾಬ್ ಕೊಲೆಗೈದ ಹಂತಕರನ್ನು ಬಂಧಿಸಿ ಕಠಿಣಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ಪ್ರಾಂತ ರೈತ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.
ಆಸ್ತಿ ವಿಚಾರವಾಗಿ ಗಲಾಟೆ ನಡೆದು ರೈತ ಮಹಮ್ಮದ್ ಸಾಬ್ ಕೊಲೆಯಾಗಿರುವುದು ಖಂಡನೀಯ. ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳುವಲ್ಲಿ ಗಬ್ಬೂರು ಠಾಣೆ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಕೊಲೆಯಾದ ವ್ಯಕ್ತಿಯ ಕುಟುಂಬ ಆತಂಕದಲ್ಲಿದೆ. ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸಿ ಕಠಿಣಶಿಕ್ಷೆ ವಿಧಿಸಬೇಕು. ಮೃತ ರೈತನ ಕುಟುಂಬಕ್ಕೆ ಸೂಕ್ತ ಭದ್ರತೆ ಹಾಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಕಾರ್ಯದರ್ಶಿ ಮೌನೇಶ, ಮುಖಂಡರಾದ ಶಬ್ಬೀರ್ ಜಾಲಹಳ್ಳಿ, ದಾವಲ್ ಸಾಬ್, ಹನುಮಂತ ಮಡಿವಾಳ, ರಿಯಾಜ್ ಆರ್ತಿ, ರಾಜು ನಾಯಕ, ಮಹಾಲಿಂಗ ದೊಡ್ಡಮನಿ, ರಿಯಾಜ್ ಖುರೇಷಿ, ರಂಗನಾಥ ಬುಂಕಲದೊಡ್ಡಿ, ರಾಮನಗೌಡ ಗಣೇಕಲ್, ಹನುಮಂತ ಮಂಡಲಗುಡ್ಡ ಇತರರಿದ್ದರು.