ಹುಸೇನಪುರ ಸೇರಿ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ನಂತರ ಕವಿತಾಳದಿಂದ ನಡೆದುಕೊಂಡು ಹೋಗುತ್ತಿರುವುದು. 
ರಾಯಚೂರು

ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಎಸ್ಸೆಸ್ಸೆಲ್ಸಿ ಪರೀಕ್ಷೆ

ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ

ಕವಿತಾಳ: ಪಟ್ಟಣದ 3 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡುವಂತಾಗಿದೆ.

ಸಮೀಪದ ಹುಸೇನಪುರ, ಸೈದಪುರ, ಕಡ್ಡೋಣಿ, ತೊಪ್ಪಲದೊಡ್ಡಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೆಳಗ್ಗೆ 8ಕ್ಕೆ ಬಸ್‌ಗೆ ಬರುತ್ತಾರೆ. ಪರೀಕ್ಷೆ ಮುಗಿದ ನಂತರ ಹುಸೇನಪುರದ ವಿದ್ಯಾರ್ಥಿಗಳು 4ಕಿಮೀ, ಕಡ್ಡೋಣಿಯ ವಿದ್ಯಾರ್ಥಿಗಳು 6 ಕಿಮೀ, ತೊಪ್ಪಲದೊಡ್ಡಿ ವಿದ್ಯಾರ್ಥಿಗಳು 8 ಕಿಮೀ ಮತ್ತು ಸೈದಪುರ 7 ಕಿಮೀ ದೂರದ ವಿದ್ಯಾರ್ಥಿಗಳು ಸಂಜೆ 6ಗಂಟೆ ವರೆಗೂ ಕಾಯದೆ ನಡೆದು ಹೋಗುತ್ತಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.