ಸಿಂಧನೂರು ತಾಲೂಕಿನ ಆರ್.ಎಚ್.ನಂ.1 ಕ್ಯಾಂಪ್‌ನ ಗ್ರಂಥಾಲಯಕ್ಕೆ ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಸಹಾಯಕ ನಿರ್ದೇಶಕರಾದ ಯಂಕಪ್ಪ, ಅಮರಗುಂಡಪ್ಪ, ಗ್ರಾಪಂ ಅಧ್ಯಕ್ಷ ಎಂ.ರೆಹಮತ್ ಪಾಷಾ, ಅಭಿವೃದ್ಧಿ ಅಧಿಕಾರಿ ಮಲ್ಲೇಶಪ್ಪ ಇದ್ದರು.
- ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ ಸೂಚನೆ
- ಆರ್.ಎಚ್.ನಂ.1 ಕ್ಯಾಂಪ್ ಗ್ರಾಪಂ ಪಂಚಾಯಿತಿಯಲ್ಲಿ ದಾಖಲೆಗಳ ಪರಿಶೀಲನೆ
ಸಿಂಧನೂರು: ತಾಲೂಕಿನ ಆರ್.ಎಚ್.ನಂ.1 ಕ್ಯಾಂಪ್ ಗ್ರಾಪಂ ಪಂಚಾಯಿತಿಗೆ ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ ಶನಿವಾರ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಗ ್ರಂಥಾಲಯಕ್ಕೆ ತೆರಳಿ ಹಾಜರಾತಿ ಪರಿಶೀಲಿಸಿ, ಗಣಕಯಂತ್ರದಲ್ಲಿ ಓದುಗರ ನೋಂದಣಿ ಮಾಡಬೇಕು ಎಂದು ಗ್ರಂಥಪಾಲಕರಿಗೆ ಸೂಚಿಸಿದರು. ನಂತರ ಕೂಸಿನ ಮನೆಗೆ ತೆರಳಿ ಮಕ್ಕಳಿಗೆ ಮೆನು ಪ್ರಕಾರ ಪೌಷ್ಟಿಕ ಆಹಾರ ನೀಡಬೇಕು. ಮುಖ್ಯವಾಗಿ ಸ್ವಚ್ಛತೆ ಕಾಪಾಡಬೇಕೆಂದು ಕೇರ್ ಟೇಕರ್‌ಗಳಿಗೆ ಉಪ ಕಾರ್ಯದರ್ಶಿ ಸಲಹೆ ನೀಡಿದರು.
ಬಳಿಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಸಿಬ್ಬಂದಿಯಿಂದ ಮಾಹಿತಿ ಪಡೆದರು. ಸಿಬ್ಬಂದಿ ವಸತಿಗೃಹ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಸಹಾಯಕ ನಿರ್ದೇಶಕರಾದ ಯಂಕಪ್ಪ, ಅಮರಗುಂಡಪ್ಪ, ಗ್ರಾಪಂ ಅಧ್ಯಕ್ಷ ಎಂ.ರೆಹಮತ್ ಪಾಷಾ, ಪಿಡಿಒ ಮಲ್ಲೇಶಪ್ಪ, ಧನ್ಯಪ್ರಭು, ಬಿಎಫ್‌ಟಿ ವೀರ್‌ಕುಮಾರ್ ಇದ್ದರು.