ಮಾನ್ವಿ ತಾಲೂಕಿನ ಪೋತ್ನಾಳ್ ಗ್ರಾಮದಲ್ಲಿ ಜನವೇದಿಕೆ ಸಮಿತಿಯಿಂದ ತಾಲೂಕು ವೈದ್ಯಾಧಿಕಾರಿ ಡಾ.ಶರಣಬಸವರಾಜಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಹಂಪಯ್ಯ, ದೇವರಾಜ ಕೊಟ್ನೇಕಲ್ ಇದ್ದರು.
ಪೋತ್ನಾಳ್ ಪಿಎಚ್‌ಸಿಗೆ ಅಗತ್ಯ ಸೌಕರ್ಯ ಕಲ್ಪಿಸಿ
ಮಾನ್ವಿ: ತಾಲೂಕಿನ ಪೋತ್ನಾಳ್ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಮೂಲಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಜನವೇದಿಕೆ ತಾಲೂಕು ಸಮಿತಿ ಗುರುವಾರ ಟಿಎಚ್‌ಒ ಶರಣಬಸವರಾಜಗೆ ಮನವಿ ಸಲ್ಲಿಸಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ ತಡೆಗೋಡೆ, ಮೂಲ ಸೌಕರ್ಯ ವ್ಯವಸ್ಥೆ ಮಾಡಬೇಕು. ರಾತ್ರಿ ವೇಳೆಯೂ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ವೈದ್ಯರು ಹಾಗೂ ಸಿಬ್ಬಂದಿ ಹುದ್ದೆ ಖಾಲಿ ಇದ್ದು, ಕೂಡಲೇ ನೇಮಕ ಮಾಡಬೇಕು.
ಆಸ್ಪತ್ರೆಯಲ್ಲಿ ರಕ್ತಪರೀಕ್ಷೆ, ಕುಟುಂಬ ನಿಯಂತ್ರಣ ಯೋಜನೆಯ ಶಸ್ತ್ರಚಿಕಿತ್ಸೆ, ಹೆರಿಗೆ, ತಪಾಸಣೆ, ಆಂಬುಲೆನ್ಸ್ ವ್ಯವಸ್ಥೆ, ನಾಯಿ ಕಡಿತಕ್ಕೆ ಚಿಕಿತ್ಸೆ ಸೇರಿ ಅಗತ್ಯ ಔಷಧಗಳನ್ನು ಒದಗಿಸಬೇಕು. ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹನುಮೇಶ ನಾಯ್ಕ, ಜನವೇದಿಕೆ ಸದಸ್ಯ ಯಂಕೋಬಾ ನಾಯಕ್, ದಲಿತ ಸಂಘಟನೆಯ ಶಿವಜ್ಞಾನಿ, ಪ್ರಮುಖರಾದ ಈಶಮ್ಮ, ಸಿದ್ದಲಿಂಗಮ್ಮ, ಹಂಪಯ್ಯ, ದೇವರಾಜ, ಸುಂಕ್ಲಮ್ಮ, ದೇವರಾಜ ಕೊಟ್ನೇಕಲ್, ಶ್ರೀದೇವಿ, ಸದಾನಂದ, ಯೇಸಪ್ಪ ಇತರರಿದ್ದರು.