ಮುದಗಲ್‌ನಲ್ಲಿ ಶಾಸಕ ಮಾನಪ್ಪ ವಜ್ಜಲ್‌ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು. ಪ್ರಮುಖರಾದ ಸಿದ್ದಯ್ಯ ಸ್ವಾಮಿ, ಕರಿಯಪ್ಪ ಯಾದವ್, ನಾಗರಾಜ ತಳವಾರ, ಮಂಜುನಾಥ ನಂದವಾಡಿ ಇತರರಿದ್ದರು. 
ರಾಯಚೂರು

ದಲಿತಕೇರಿಗಳಿಗೆ ಮೂಲಸೌಕರ್ಯ ಕಲ್ಪಿಸಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಅನುದಾನ

ದಲಿತಕೇರಿಗಳಿಗೆ ಮೂಲಸೌಕರ್ಯ ಕಲ್ಪಿಸಿ

ಮುದಗಲ್: ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಡಾ.ಅಂಬೇಡ್ಕರ್ ವೃತ್ತಕ್ಕೆ 20 ಲಕ್ಷ ರೂ. ಅನುದಾನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಪುರಸಭೆಯಲ್ಲಿ ಶಾಸಕ ಮಾನಪ್ಪ ವಜ್ಜಲ್‌ಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ವೆಂಕಟರಾಯನ ಪೇಟೆಯಲ್ಲಿರುವ ಡಾ.ಅಂಬೇಡ್ಕರ್ ಭವನ ಶಿಥಿಲಗೊಂಡಿದ್ದು, ಕೂಡಲೇ ಹೊಸ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು.
ದಲಿತರು ವಾಸಿಸುವ ಕೇರಿಗಳಿಗೆ ಮೂಲ ಸೌಕರ್ಯ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಪ್ರಮುಖರಾದ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಹನುಮಂತ ಬಡಿಗೇರ್, ನಾಗರಾಜ ಕಟ್ಟಿಮನಿ, ಪ್ರಕಾಶ ಬಡಿಗೇರ್, ಆಕಾಶ, ಭರತ್ ಗುಡಿಹಟ್ಟಿ, ಹನುಮಂತ ಡಕ್ಕಲಿಗ, ಹನುಮಂತ ಇತರರಿದ್ದರು.