ಮಾನ್ವಿ ತಾಪಂ ಆವರಣದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಪಂ ಸದಸ್ಯರು ಹಾಗೂ ವಿವಿಧ ದಲಿತಪರ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಗ್ರಾಪಂ ಸದಸ್ಯ ದೇವೇಂದ್ರಪ್ಪ, ಮೌನೇಶ, ಮರಿಸ್ವಾಮಿ, ಸುಧಾಕರ ಅರೋಲಿ ಇತರರಿದ್ದರು. 
ರಾಯಚೂರು

ಗ್ರಾಪಂ ತೆರಿಗೆ ಹಣದ ಮಾಹಿತಿ ನೀಡಿ

ಪ್ರಮುಖ ಮುಖ್ಯಾಂಶಗಳು

  • ಮಾಹಿತಿ
  • ಗ್ರಾಪಂ ತೆರಿಗೆ
  • ಪ್ರತಿಭಟನೆ

ಗ್ರಾಪಂ ತೆರಿಗೆ ಹಣದ ಮಾಹಿತಿ ನೀಡಿ

ಮಾನ್ವಿ: ತಾಲುಕಿನ ಜಾನೇಕಲ್ ಗ್ರಾಪಂನಿಂದ ಸಂಗ್ರಹಿಸಿದ ತೆರಿಗೆ ಹಣದ ಮಾಹಿತಿ ನೀಡಬೇಕು. ಬಸವ ವಸತಿ, ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಗ್ರಾಮ ಸಭೆ ಮೂಲಕ ಹಂಚಿಕೆ ಮಾಡಬೇಕು. ಜತೆಗೆ ಇತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಪಂ ಸದಸ್ಯರು ಹಾಗೂ ದಲಿತಪರ ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಗ್ರಾಪಂ ಸದಸ್ಯ ದೇವೆಂದ್ರಪ್ಪ ಮಾತನಾಡಿ, ಜಾನೆಕಲ್ ಗ್ರಾಪಂನಲ್ಲಿ 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಬೇಕು. ಇ-ಸ್ವತ್ತು ಯೋಜನೆಯಡಿ ಆಸ್ತಿ ಮಾಲೀಕರಿಗೆ ಖಾತಾ ಉತಾರ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿಳಂಬ ಮಾಡುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಗವಿಗಟ್ಟ ಗ್ರಾಮದಲ್ಲಿ ಶಕ್ತಿ ಭವನ ನಿರ್ಮಿಸಬೇಕು.
ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಗ್ರಾಮದ ಶಾಲೆಯಲ್ಲಿ ಕೈಗೊಂಡಿರುವ ಮಳೆ ನೀರು ಕೋಯ್ಲು ಕಾಮಗಾರಿ, ಮರಂ ರಸ್ತೆ ಕಾಮಗಾರಿ ಬಾಕಿ ಬಿಲ್ ಪಾವತಿಸಬೇಕು. ನರೇಗಾದಡಿ ಸಮರ್ಪಕ ಕೆಲಸ ನೀಡದ ಪಿಡಿಒ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಸದಸ್ಯರಾದ ಜೆ.ರಮೇಶ ನಾಯಕ ಗವಿಗಟ್ಟ, ದಲಿತ ಸೇನೆ ತಾಲೂಕು ಅಧ್ಯಕ್ಷ ರಮೇಶ ಕರೆಗುಡ್ಡ, ಪದಾಧಿಕಾರಿಗಳಾದ ಕರಿಯಪ್ಪ ನಕ್ಕುಂದಿ, ಭೀಮರಾಯ, ಮುತ್ತಣ್ಣ, ಹುಸೇನಪ್ಪ, ಮಾರೇಶ, ಬಿ.ಅಮರೇಶ ನಾಯಕ, ಮಾರೇಶ ಬಂಡಾರಿ, ಬಡಕಪ್ಪ, ನಾಗರಾಜ, ಶಾಂತಕುಮಾರ, ಚನ್ನಪ್ಪಗೌಡ ಇತರರಿದ್ದರು.