ಮಸ್ಕಿಯಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಹನುಮಂತ ಮುದಬಾಳ, ವೀರಭದ್ರ ಕೋಠಾರಿ, ಶಿವಕುಮಾರ ನಾಗರಬೆಂಚಿ, ಭೀಮರಾವ್ ಇತರರಿದ್ದರು.
ಮಸ್ಕಿ: ತಾಲೂಕಿನ ಮೆದಕಿನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟ ಅತಿಥಿ ಶಿಕ್ಷಕ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಗುರುವಾರ ತಹಸಿಲ್ ಕಚೇರಿ ಮುಂದೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ತಾಲೂಕು ಘಟಕ ಪ್ರತಿಭಟನೆ ನಡೆಸಿತು.
ತಾಲೂಕು ಅಧ್ಯಕ್ಷ ಹನುಮಂತ ಎನ್.ಮುದಬಾಳ ಮಾತನಾಡಿ, ಅತಿಥಿ ಶಿಕ್ಷಕ ವೀರನಗೌಡಗೆ ತಾಯಿ ಇದ್ದು, ಇದ್ದೊಬ್ಬ ಮಗನ ಅಗಲಿಕೆಯಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಆರ್ಥಿಕ ನೆರವು ನೀಡಿ ಸಾಮಾಜಿಕ ಭದ್ರತೆ ಒದಗಿಸಬೇಕೆಂದು ಕೋರಿದರು.
ನಂತರ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮನವಿ ಸಲ್ಲಿಸಲಾಯಿತು. ಸಂಘದ ವೀರಭದ್ರ ಕೋಠಾರಿ, ಶಿವಕುಮಾರ ನಾಗರಬೆಂಚಿ, ಭೀಮರಾವ್, ಮಹಾಂತೇಶ ತೋಟದ, ಯಮನೂರಪ್ಪ, ಬಸವರಾಜ, ರಮೇಶ ತಲೇಖಾನ್, ಶಿವರಾಜ ಮಾರಲದಿನ್ನಿ, ಸಿದ್ದಪ್ಪ ಬುದ್ದಿನ್ನಿ, ಹನುಮಂತಪ್ಪ ಇತರರಿದ್ದರು.