ಮಸ್ಕಿ ತಹಸಿಲ್ ಕಚೇರಿ ಮುಂದೆ ದಸಂಸ (ಡಾ.ಎನ್.ಮೂರ್ತಿ ಸ್ಥಾಪಿತ) ನೇತೃತ್ವದಲ್ಲಿ ಹಂಚಿನಾಳ (ಯು) ಕ್ಯಾಂಪ್ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಮಲ್ಲಿಕ ಮುರಾರಿ,ಮರಿಸ್ವಾಮಿ ಹಸಮಕಲ್, ಚಿನ್ನಪ್ಪ ಹಂಪನಾಳ, ವೀರಭದ್ರಗೌಡ ಇತರರಿದ್ದರು. 
ರಾಯಚೂರು

ಹಂಚಿನಾಳ ಕ್ಯಾಂಪ್‌ನಲ್ಲಿ ಸ್ಮಶಾನ ಭೂಮಿ ನೀಡಿ

ಮಸ್ಕಿ: ತಾಲೂಕಿನ ಗುಡದೂರು ಹೋಬಳಿ ಹಂಚಿನಾಳ (ಯು) ಕ್ಯಾಂಪ್‌ನಲ್ಲಿ ಸ್ಮಶಾನಕ್ಕಾಗಿ ಭೂಮಿ ನೀಡಬೇಕೆಂದು ಆಗ್ರಹಿಸಿ ದಸಂಸ (ಡಾ.ಎನ್.ಮೂರ್ತಿ ಸ್ಥಾಪಿತ) ತಾಲೂಕು ಘಟಕ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮಸ್ಕಿ ನಗರ ಘಟಕದ ಅಧ್ಯಕ್ಷ ಮಲ್ಲಿಕ ಮುರಾರಿ ಮಾತನಾಡಿ, ಹಂಚಿನಾಳ (ಯು) ಕ್ಯಾಂಪ್‌ನಲ್ಲಿ ಸ್ಮಶಾನ ಭೂಮಿ ಇಲ್ಲದ ಕಾರಣ ಯಾರಾದರೂ ಮೃತಪಟ್ಟರೆ ಹೂಳಲು ಜಾಗ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಈ ಕುರಿತು ಹಲವು ಸಲ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ ಅವರು, ಕ್ಯಾಂಪ್‌ನ ಸರ್ವೇ ನಂ. 16ರಲ್ಲಿ 4 ಎಕರೆ ಭೂಮಿ ಗುರುತಿಸಿದ್ದು, ಅದರಲ್ಲಿ ಒಂದು ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ನೀಡಬೇಕೆಂದು ಒತ್ತಾಯಿಸಿದರು. 
ಪ್ರಮುಖರಾದ ಮರಿಸ್ವಾಮಿ ಹಸಮಕಲ್, ಚಿನ್ನಪ್ಪ ಹಂಪನಾಳ, ವೀರಭದ್ರಗೌಡ, ಬಸವರಾಜ, ಮರಿಯಪ್ಪ, ಮಲ್ಲಪ್ಪ ನಾಯಕ, ವೆಂಕಪ್ಪ ವಕ್ರಾಣಿ, ಬಸಮ್ಮ ಬಳಿಗಾರ, ಹುಲಿಗೆಮ್ಮ, ಬಸಮ್ಮ, ವಜ್ರಮ್ಮ, ತಿಪ್ಪಮ್ಮ, ಮಲ್ಲಮ್ಮ, ಶಿವಮ್ಮ, ಯಂಕಮ್ಮ ಇತರರಿದ್ದರು.