ಲಿಂಗಸುಗೂರು ಸಹಾಯಕ ಆಯುಕ್ತ ಕಚೇರಿಯ ಗ್ರಾಮ ಆಡಳಿತಾಧಿಕಾರಿ ದ್ರುವ ದೇಶಪಾಂಡೆಗೆ ವಾರ್ಡ್ ನಿವಾಸಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ರಾಘವೇಂದ್ರ ಮುತಾಲಿಕ್ ವಕೀಲ, ಡಿ.ಬಿ ಸೋಮನಮರಡಿ, ಮಲ್ಲಿಕಾರ್ಜುನಯ್ಯ ಸ್ವಾಮಿ, ರಮೇಶ ಪತ್ತಾರ, ಡಾ.ಚಂದ್ರಶೇಖರ, ಶರಣಬಸವ ಬುಳ್ಳಾಪುರ, ಗುಡ್ಡು ಸೇಟ್, ಮಹೇಶ ಇದ್ದರು. 
ರಾಯಚೂರು

ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಿ

ಲಿಂಗಸುಗೂರು: ಪಟ್ಟಣದ 17 ಮತ್ತು 18ನೇ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಚರಂಡಿ ದುರಸ್ತಿ ಮಾಡಲು ಒತ್ತಾಯಿಸಿ ನಿವಾಸಿಗಳು ನಗರದ ಸಹಾಯಕ ಆಯುಕ್ತ ಕಚೇರಿಯ ಗ್ರಾಮ ಆಡಳಿತಾಧಿಕಾರಿ ದ್ರುವ ದೇಶಪಾಂಡೆಗೆ ಗುರುವಾರ ಮನವಿ ಸಲ್ಲಿಸಿದರು.
ವಾರ್ಡ್ 17, 18 ರಲ್ಲಿ ಸುಮಾರು 30 ವರ್ಷಗಳ ಹಿಂದೆ ಸಿಸಿ ರಸ್ತೆ, ಚರಂಡಿಗಳನ್ನು ನಿರ್ಮಿಸಲಾಗಿತ್ತು. ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಹಾಗೂ ನಿರ್ವಹಣೆ ಕೊರತೆಯಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿವೆ. ಮಳೆ ಬಂದಾಗ ಕೆಸರುಗದ್ದೆಯಂತಾಗಿ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಚರಂಡಿ ನೀರು, ಮಲ ಮೂತ್ರ ವಿಸರ್ಜನೆಯ ತ್ಯಾಜ್ಯವನ್ನು ನೇರವಾಗಿ ಸೆಪ್ಟಿಕ್ ಟ್ಯಾಂಕ್ ಮೂಲಕ ಪುರಸಭೆ ನಿರ್ಮಿಸಿದ ಚರಂಡಿಗೆ ಬಿಡಲಾಗುತ್ತಿದೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡ್‌ಗಳ ಅಭಿವೃದ್ಧಿ ಕುರಿತು ಪುರಸಭೆ ಗಮನಕ್ಕೆ ತರಲಾಗಿದೆ. ಅಲ್ಲದೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.