ಸಿರವಾರದಲ್ಲಿ ತಹಸೀಲ್ದಾರ್ ಅಶೋಕ ಪವಾರ್‌ಗೆ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ ಮನವಿ ಸಲ್ಲಿಸಿತು. ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಅಡವಿರಾವ್, ಅಮರೇಗೌಡ ಲಕ್ಕಮದಿನ್ನಿ, ಶರಣಪ್ಪ ಕವಿತಾಳ ಇತರರಿದ್ದರು. 
ರಾಯಚೂರು

ಸಮರ್ಪಕ ವೇತನ-ಸೇವಾ ಭದ್ರತೆ ಒದಗಿಸಿ

ನರೇಶ್ ಕುಮಾರ್
ಸಿರವಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ (ಟಿಯುಸಿಐ) ಗುರುವಾರ ನೀರಾವರಿ ನಿಗಮದ ಇಇಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅಶೋಕ ಪವಾರ್‌ಗೆ ಸಲ್ಲಿಸಿತು.
ಕಳೆದ ವರ್ಷ ಫೆಬ್ರವರಿಯಿಂದ ಕಾಲುವೆ ಕಾರ್ಮಿಕರ 1.10 ಕೋಟಿ ರೂ ಅನುದಾನ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಸೇವಾ ಭದ್ರತೆ, ಸಮರ್ಪಕ ವೇತನ, ವೈದ್ಯಕೀಯ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಭಾರಿ ಮಳೆಯ ಸಂದರ್ಭಗಳಲ್ಲಿ ಕಾಲುವೆ ನಿರ್ವಹಣೆ ಹಾಗೂ ತುರ್ತು ಕಾರ್ಯಗಳಲ್ಲಿ ತೊಡಗುವ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹಂಗಾಮಿ ಕಾಲುವೆ ಕಾರ್ಮಿಕರಿಗೆ 2026ರ ಮೇ ತಿಂಗಳವರೆಗಿನ ಬಾಕಿ ವೇತನ ಪಾವತಿಸಬೇಕು. 
ನಿಗಮದ ಎಂಡಿ ಆದೇಶದಂತೆ ಎಲ್ಲವನ್ನೂ ಸರಿಯಾಗಿ ಜಾರಿಗೊಳಿಸಬೇಕು. ಕಾರ್ಮಿಕರಿಗೆ ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯವನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು. 
ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಅಡವಿರಾವ್, ಸಿರವಾರ ತಾಲೂಕು ಅಧ್ಯಕ್ಷ ಅಮರೇಗೌಡ ಲಕ್ಕಮದಿನ್ನಿ, ಶರಣಪ್ಪ ಕವಿತಾಳ, ಶರಣಪ್ಪ ಮಾನ್ವಿ, ಹನುಮಂತ ಅಭಿಷೇಕ, ಮಹೇಶ್ ನೇಕಾರ, ರಾಮಸ್ವಾಮಿ, ಬಸವರಾಜ ಗೊಲದಿನ್ನಿ, ಸಾಬಣ್ಣ ಗೊಲದಿನ್ನಿ, ರಮೇಶ ದೊರೆ, ಭೀಮರಾಜ್, ರಜಾಕ್, ಕಾಸಿಂ ಇದ್ದರು.