ಮಾನ್ವಿಯಲ್ಲಿ ಪುರಸಭೆ ಸಿಒ ಪರಶುರಾಮ್ ದೇವಮಾನೆ ಜತೆಗೆ 26ನೇ ವಾರ್ಡ್ ನಿವಾಸಿಗಳು ಕುಡಿವ ನೀರಿನ ಸಮಸ್ಯೆ ಕುರಿತು ಚರ್ಚಿಸಿದರು. ಪ್ರಮುಖರಾದ ಮಹ್ಮದ್, ಹುಸೇನ್‌ಸಾಬ್ ಇತರರಿದ್ದರು. 
ರಾಯಚೂರು

ಕುಡಿವ ನೀರು ಸಮರ್ಪಕವಾಗಿ ಪೂರೈಸಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಸಮರ್ಪಕ

ಕುಡಿವ ನೀರು ಸಮರ್ಪಕವಾಗಿ ಪೂರೈಸಿ

ಮಾನ್ವಿ: ಕುಡಿವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿ ಪಟ್ಟಣದ 26ನೇ ವಾರ್ಡ್ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಪರಶುರಾಮ್‌ಗೆ ಮನವಿ ಸಲ್ಲಿಸಿದರು.
ಕುಡಿವ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ವಾರಕ್ಕೊಮ್ಮ ನೀರು ಬರುತ್ತಿದ್ದು, ಸಮರ್ಪಕವಾಗಿ ಪೂರೈಸುತ್ತಿಲ್ಲ. ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಇಸ್ಲಾಂ ನಗರ ಮತ್ತು ಫರಾ ಕಾಲನಿಯ ನಿವಾಸಿಗಳು ಕುಡಿವ ನೀರಿಗಾಗಿ ಪರದಾಡುತ್ತಿದ್ದಾರೆ. ಪುರಸಭೆ ಸಿಬ್ಬಂದಿ ಜಾಫರ್ ಮತ್ತು ಬಾಬು ನೀರಿನ ಸಮಸ್ಯೆಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಬೇಸಿಗೆ ಮುಗಿಯುವವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಇಲ್ಲದಿದ್ದರೆ ಪುರಸಭೆ ಮುಂದೆ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.