AMBANA AROLIKAR 
ರಾಯಚೂರು

ಕೃಷಿ ವಿವಿಯ ನೇಮಕಾತಿ ವಿರೋಧಿಸಿ ಜವವರಿ ಮೊದಲ ವಾರದಲ್ಲಿ ಪ್ರತಿಭಟನೆ

ರಾಯಚೂರು ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಿಯಮ ಉಲ್ಲಂಘಿಸಿ 75 ಬೋಧಕೇತರ ಸಿಬ್ಬಂದಿಗಳ ನೇರ ನೇಮಕಾತಿ ಅಧಿಸೂಚನೆ ಪ್ರಕಟಸಿ ಕುಲಪತಿ ಡಾ.ಹನುಮಂತಪ್ಪ ಅಕ್ರಮವಾಗಿ ಹುದ್ದೆಗಳ ನೇಮಕಾತಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಆರೋಪಿಸಿ ಜನವರಿ ಮೊದಲ ವಾರದಲ್ಲಿ ವಿಶ್ವವಿದ್ಯಾಲಯ ಬೀಗ ಹಾಕಿ ಪ್ರತಿಭಟನೆ ಮಾಡಲಾಗುತ್ತದೆಂದು ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಅಂಬಣ್ಣ ಆರೋಲಿಕರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವವಿದ್ಯಾಲಯ ನಿಯಮಗಳಂತೆ ಸಹ ಪ್ರಾಧ್ಯಾಪಕರ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸದೇ ಬೆಂಗಳೂರಿನಿ ಗಾಂಧಿ ಕೃಷಿವಿಜ್ಞಾನ ಕೇಂದ್ರದ ಮೂಲಕ ಜ.17 ರಿಂದ 20ವರೆಗೆ ನಡೆಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ನಿಗಧಿಯಾಗಿರುವ ಪರೀಕ್ಷೆ ಕುರಿತಂತೆ ನ್ಯಾಯಾಲಯಕ್ಕೂ ಹೋಗಿದ್ದರಿಂದ ಮೂರು ಬಾರಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಮೂರು ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಲಿರುವ ಕುಲಪತಿ ಡಾ.ಹನುಮಂತಪ್ಪ ಇವರು ಅಭ್ಯರ್ಥಿಗಳಿಂದ 40 ರಿಂದ 50 ಲಕ್ಷ ರೂ ಹಣವಸೂಲಿ ಮಾಡಿಕೊಂಡು ಕಾನೂನು ಬಾಹಿರ ನೇಮಕಾತಿ ಪ್ರಕ್ರಿಯೆ ನಡೆಸಲು ಹೊರಟಿದ್ದಾರೆ.
ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ, ಕೃಷಿ ಇಲಾಖೆ ಸಚಿವರು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈಕುರಿತು ರಾಜ್ಯಪಾಲರು, ಉನ್ನತ ಶಿಕ್ಷಣ, ಕೃಷಿ ಸಚಿವರು ಸೇರಿದಂತೆ ದೂರು ನೀಡಲು ನಿಯೋಗ ತೆರಳಿ ಮನವಿ ಸಲ್ಲಿಸಲಾಗುತ್ತದೆ. ಪರೀಕ್ಷೆ ರದ್ದುಗೊಳಿಸಿ ಹೊಸ ಅಧಿಸೂಚನೆ ಹೊರಡಿಸದೇ ಇದ್ದರೆ ಜನವರಿ ಮೊದಲ ವಾರದಲ್ಲಿ ವಿಶ್ವವಿದ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಪಿ.ಅನಿಲ್‌ಕುಮಾರ, ಎಸ್.ರಾಜು, ಮಲ್ಲೇಶ, ರಾಘವೇಂದ್ರ ಬೋರೆಡ್ಡಿ ಇದ್ದರು.