ಮೈತ್ರೇಯಿ ಕೃಷ್ಣನ್ 
ರಾಯಚೂರು

ಆ.20 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

ರಾಚಯ್ಯ ಸ್ವಾಮಿ

ರಾಯಚೂರು

ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಿ ಪರಿಷ್ಕೃತ ಕನಿಷ್ಟ ವೇತನ ಕಾಯ್ದೆ ಜಾರಿಗೆ ಒತ್ತಾಯಿಸಿ ಆ.20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ಆಯೋಜಿಸಲಾಗಿದೆಂದು ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಪದ್ಧತಿ ಜೀತಪದ್ದತಿಯ ಇನ್ನೊಂದು ಮುಖವೆಂದು ಸುಪ್ರಿಂಕೋರ್ಟ್ ಹೇಳಿದ್ದರೂ ಸರ್ಕಾರ, ಖಾಸಗಿ ಸಂಸ್ಥೆಯಗಳಲ್ಲಿ ಗುತ್ತಿಗೆ ಪದ್ಧತಿ ಪೋಷಿಸಲಾಗುತ್ತಿದೆ. ಪ್ರತಿ ಕಾರ್ಮಿಕನಿಗೂ 42 ಸಾವಿರ ರೂ. ವೇತನ ನಿಗಧಿಪಡಿಸಬೇಕು. ಪರಿಷ್ಕೃತ ಕನಿಷ್ಟ ವೇತನ ಜಾರಿಯಾದರೂ ಅನೇಕ ಕಡಗಳಲ್ಲಿ ಹೊಸ ಕನಿಷ್ಟ ವೇತನ ಪಾವತಿಸುತ್ತಿಲ್ಲ. ಯಾವುದೇ ತಡೆಯಾಜ್ಞೆ ಇಲ್ಲದೇ ಇದ್ದರೂ ಸರ್ಕಾರ ಜಾರಿಗೆ ಮುಂದಾಗುತ್ತಿಲ್ಲ. ವೇತನ ಮಿತಿಯಿಲ್ಲದೇ ಇಎಸ್‌ಐ ಜಾರಿಗೊಳಿಸು ವದು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕಾರ್ಮಿಕರು ಭಾಗವಹಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ ಪೂಜಾರ,ಅಜೀಜ್, ಬಸವರಾಜ, ವೀರಭದ್ರ, ಖಾದರ ಅಹ್ಮದ್ ಇದ್ದರು.