ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಶಿಕ್ಷಣದ ಜೊತೆಗೆ ವಸತಿ ಸೌಲಭ್ಯವನ್ನು ನೀಡುತ್ತಿದ್ದು, ಇದಕ್ಕಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಡಿ 2 ದಶಕ ಗಳಿಂದ ಅಡುಗೆ, ಕಾವಲು, ಡಿ.ಗ್ರೂಸ್ ಸೇರಿ ಇತರೆ ಕೆಲಸಗಳನ್ನು ಮಾಡುತ್ತಾ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿದ್ದಾರೆ. ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ಈ ಕೆಲಸಗಳು ಖಾಯಂ ಸ್ವರೂಪದ ಕೆಲಸಗಳಾಗಿದ್ದರೂ. ಈ ಕಾರ್ಮಿಕರನ್ನು ಖಾಯಂಗೊಳಿಸುತ್ತಿಲ್ಲ ಎಂದರು.
ರಾಜ್ಯದ ಎಲ್ಲಾ ವಸತಿ ಶಾಲೆಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಖಾಯಂಗೊಳಿಸುವ ತನಕ ಸಮಾನ ಕೆಲಸಕ್ಕಾಗಿ ಸಮಾನ ವೇತನದಂತೆ ತಿಂಗಳಿಗೆ 35 ಸಾವಿರ ರೂ. ವೇತನ ಪಾವತಿಸಬೇಕು. ಪ್ರತಿ ವಸತಿ ಶಾಲೆಯಲ್ಲಿ ಸರಾಸರಿ 5-7 ಸಿಬ್ಬಂದಿ ಕೊರತೆಯಿದ್ದು, ಕೆಲಸದ ಭಾರ ತಗ್ಗಿಸಲು ಹಾಗೂ 8 ಗಂಟೆ ಕೆಲಸ ಅನ್ವಯಿಸಲು ಹೆಚ್ಚಿನ ಕೆಲಸಗಾರರನ್ನು ತುಂಬಬೇಕು. ವಸತಿ ಶಾಲೆಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಆದೇಶ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹುಸೇನಪ್ಪ, ಶಿವರಾಜ , ಬಸವರಾಜ ಇದ್ದರು.