ಕೇಂದ್ರ ಸರ್ಕಾರ ರೂಪಿಸಲು ಹೊರಟಿರುವ ಮಂಗಳ ಮುಖಿಯರ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯಿಂದ ಶನಿವಾರ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ಪ್ರಮುಖರಾದ ಪ್ರಗತಿ, ಅಕ್ಷರ,ಅಭಿಷೇಕ, ನಕ್ಷತ್ರ,ಭೀಮ,ಶಿರಿಷ, ಮಧುಶ್ರೀ, ಅಯಿನಾಶ್ರೀ, ಮಹೇಶ ಇದ್ದರು.
ರಾಯಚೂರು ಕೇಂದ್ರ ಸರ್ಕಾರ ರೂಪಿಸಲು ಹೊರಟಿರುವ ಮಂಗಳ ಮುಖಿಯರ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಲಾಯಿತು.
ನಗರದ ಬಿ.ಆರ್.ಬಿ. ವೃತ್ತದಿಂದ ವಿವಿಧ ವೃತ್ತಗಳ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಪ್ರತಿಭಟನೆ ಮಾಡಿದರು. ಲಿಂಗತ್ವ ಅಲ್ಪಸಂಖ್ಯಾತರ ಗುರತೀನ ಸ್ವಯಂ ನಿರ್ಣಯದ ಹಕ್ಕನ್ನು ಕಸಿದುಕೊಳ್ಳುವ ತಿದ್ದುಪಡಿ ಕಾಯ್ದೆ ಸಂವಿಧಾನ ನೀಡಿರುವ ಹಕ್ಕು ಗಳ ರಕ್ಷಣೆ ವಿರೋಧವಾಗಿದೆ. ಸುಪ್ರಿಂಕೋರ್ಟ್ ನೀಡರುವ ತೀರ್ಪಿನ ಉಲ್ಲಂಘನೆಯಾಗಿದ್ದು ಕೂಡಲೇ ತಿದ್ದುಪಡಿ ಕಾಯ್ದೆಯನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.
2017 ರಲ್ಲಿ ಕರ್ನಾಟಕ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ವ್ಯಕ್ತಿಗಳ ರಾಜ್ಯ ನೀತಿಯನ್ನು ರೂಪಿಸಿ ಲಿಂಗತ್ವ ಅಲ್ಪಸಂಖ್ಯಾತರ ವ್ಯಕ್ತಿಗಳ ವೈಯಕ್ತಿಕ ಮತ್ತು ಸಮೂಹವಾಗಿ ಸಂವಿಧಾನಿಕ ಭರವಸೆಗಳನ್ನು ಖಾತ್ರಿ ಪಡಿಸಿತ್ತು. ಆದರೆ ಪ್ರಸ್ತಾಪಿತ ತಿದ್ದುಪಡಿ ಕಾಯ್ದೆ ಲಿಂಗತ್ವ ಅಲ್ಪಸಂಖ್ಯಾತರ ಉಲ್ಲೇಖಿತ ತತ್ವಗಳಿಗೆ ವಿರುದ್ಧವಾಗಿದೆ. ಟ್ರಾನ್ಸ್‌ಜೆಂಡರ್ ಎಂಬ ಕಾನೂನು ವ್ಯಾಖ್ಯೆಯನ್ನು ಸೀಮಿತಗೊಳಿಸಿ ಹಿಂಸೆಗೆ ಒಳಗಾದ ವ್ಯಕ್ತಿಯನ್ನು ಗುರುತಿಸುವ ಹೆಸರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ವಿಭಜಿಸಿ ಅಂತರಲಿಂಗ ಲಕ್ಷಣಗಳಿರುವವರೆಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಕಾಯ್ದೆಯಂತೆ ವೈದ್ಯಕೀಯ ಅಧಿಕಾರ ವ್ಯವಸ್ಥೆ ದೇಹಗಳ ಮೇಲೆ ಗುರುತು, ವೈದ್ಯಕೀಯ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಬಹಿರಂಗ ಪಡಿಸುವ ಅಧಿಕಾರ ನೀಡಲಾಗುತ್ತದೆ. ಅವೈಜ್ಞಾನಿಕವಾಗಿ ಲಿಂಗತ್ವ ನಿರ್ಧರಿಸುವ ಕ್ರಮ ವಿರೋಧಿಯಾಗಿದೆ. ಕೂಡಲೇ ಭಾರತ ಸರ್ಕಾರ ರೂಪಿಸಿರುವ 2026 ಮಸೂದೆಯನ್ನು ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಗತಿ, ಅಕ್ಷರ,ಅಭಿಷೇಕ, ನಕ್ಷತ್ರ,ಭೀಮ,ಶಿರಿಷ, ಮಧುಶ್ರೀ, ಅಯಿನಾಶ್ರೀ, ಮಹೇಶ ಸೇರಿ ಅನೇಕರು ಇದ್ದರು.