ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಹಾಗೂ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ರಾಯಚೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ಮಾಡಿದರು. ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಹೆಚ್. ಪದ್ಮಾ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ರೇಣುಕಮ್ಮ , ಸಿಐಟಿಯಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಜಂಟಿ ಸಂಘಟನೆಗಳ ಪ್ರಮುಖರಾದ ವರಲಕ್ಷ್ಮಿ, ಮರಿಯಮ್ಮ, ರಮಾದೇವಿ, ಮಹ್ಮದ್ ಹನೀಫ್, ಕೆ.ಜಿ. ವೀರೇಶ, ಗೋಕುರಮ್ಮ, ಗಂಗಮ್ಮ, ಅಕ್ಕಮಹಾದೇವಿ, ವಿಶಾಲಾಕ್ಷಮ್ಮ, ಜರೀನಾಬೇಗಂ, ಅಲ್ಲಾಭಕ್ಷ, ಶರಣಮ್ಮ, ನಿಂಗಪ್ಪ, ಶ್ರೀಲೇಖಾ,ಶ್ರೀಧರ್, ಕಲಾಣಮ್ಮ ಇದ್ದರು. 
ರಾಯಚೂರು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರೋಧಿಸಿ ಪ್ರತಿಭಟನೆ

ರಾಚಯ್ಯ ಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ ನೌಕರರು ಭಾಗಿ
ರಾಯಚೂರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಹಾಗೂ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ಮಾಡಿದರು.
ನಂತರ ಜಿಲ್ಲಾಧಿಕಾರಿ ಪೂವಿತಾ ಎಸ್., ಅವರಿಗೆ ಮನವಿ ಸಲ್ಲಿಸಿದರು. ಬಿಸಿಯೂಟ ಯೋಜನೆಗೂ ಸಮರ್ಪಕ ಅನುದಾನ ನೀಡದೇ, ಖಾಸಗಿ ಸಂಸ್ಥೆಗಳಿಗೆ ವಹಿಸುವ ಮೂಲಕ ಯೋಜನೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. 2017ರಿಂದ ಪೌಷ್ಟಿಕ ಆಹಾರದ ಘಟಕ ವೆಚ್ಚವನ್ನು ಹೆಚ್ಚಿಸಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸುತ್ತಿರುವುದರಿಂದ 3ರಿಂದ 6 ವರ್ಷದ ಮಕ್ಕಳು ಅಂಗನವಾಡಿ ಗಳಿಂದ ದೂರವಾಗುತ್ತಿದ್ದು, ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಬಿಸಿಯೂಟ ಯೋಜನೆ ಆರಂಭವಾಗಿ 25 ವರ್ಷಗಳಾದರೂ ನೌಕರರ ಗೌರವಧನದಲ್ಲಿ ಸಮರ್ಪಕ ಹೆಚ್ಚಳ ಮಾಡಿಲ್ಲ. ಕೆಲಸದ ಭದ್ರತೆಯೂ ಇಲ್ಲ. ರಾಜ್ಯದಲ್ಲಿ ಬಿಸಿಯೂಟ ಯೋಜನೆಯನ್ನು ಇಸ್ಕಾನ್ ಗೆ ನೀಡುವ ಪ್ರಸ್ತಾವವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು. ಅಂಗನವಾಡಿ ನೌಕರರಿಗೆ ಎಫ್‌ಆರ್‌ಎಸ್, ಇ-ಕೆವೈಸಿ, ಪೋಷಣ್ ಟ್ರ್ಯಾಕ್‌ಸೇರಿದಂತೆ ಆನ್‌ಲೈನ್ ಕೆಲಸಗಳನ್ನು ಮಾಡಲು ಗುಣಮಟ್ಟದ ಮೊಬೈಲ್, 5ಜಿ ಡೇಟಾ ಹಾಗೂ ವೈ-ಫೈ ಸೌಲಭ್ಯ ನೀಡದೆ ಒತ್ತಡ ಹೇರಲಾಗುತ್ತಿದೆ. ಈ ರೀತಿಯ ನೌಕರ ವಿರೋಧಿ ಕ್ರಮಗಳನ್ನು ಸರ್ಕಾರ ತಕ್ಷಣ ಕೈಬಿಡಬೇಕು. ರಾಜ್ಯ ಸರ್ಕಾರವು ಚುನಾವಣಾ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15,000 ಹಾಗೂ ಸಹಾಯಕಿಯರಿಗೆ 10,000 ಗೌರವಧನ ಜಾರಿಗೊಳಿಸಬೇಕು. ಬಿಸಿಯೂಟ ನೌಕರರ ಗೌರವಧನವನ್ನು 7,000 ಹೆಚ್ಚಳ ಮಾಡಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಎಲ್‌ಜಿ-ಯುಕೆಜಿ ವಿಸ್ತರಣೆ ಮಾಡಬೇಕು.
ಬಿಸಿಯೂಟ ನೌಕರರ ಸಾಧಿಲ್‌ಾರು ಜಂಟಿ ಖಾತೆಯ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಂಗೆ ವರ್ಗಾವಣೆ ಮಾಡಿರುವ ಆದೇಶವನ್ನು ಹಿಂಪಡೆದು, ಮೊದಲಿನ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರಿಗೆ ಇಲಾಖೆ ಹೊರತಾದ ಯಾವುದೇ ಕೆಲಸಗಳನ್ನು ನೀಡಬಾರದು. ಬಿಎಲ್‌ಓ ಕರ್ತವ್ಯದಿಂದ ಸಂಪೂರ್ಣ ವಿನಾಯಿತಿ ನೀಡಬೇಕು. ಜಿಲ್ಲೆಯಲ್ಲಿ ಬಿಸಿಯೂಟ ಯೋಜನೆಗೆ ತರಕಾರಿ ಪೂರೈಕೆಯನ್ನು ಸ್ವಸಹಾಯ ಸಂಘಗಳಿಗೆ ನೀಡಿರುವ ಕ್ರಮವನ್ನು ಹಿಂಪಡೆಯಬೇಕು. ಪೋಷಣ್ ಟ್ರ್ಯಾಕರ್ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳವನ್ನು ನಿಲ್ಲಿಸಿ, ಅಂಗನವಾಡಿ ಕೇಂದ್ರಗಳಿಗೆ ಸ್ಥಳೀಯ ಆಹಾರ ಪದಾರ್ಥಗಳನ್ನೇ ಪೂರೈಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಹೆಚ್. ಪದ್ಮಾ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ರೇಣುಕಮ್ಮ , ಸಿಐಟಿಯಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಜಂಟಿ ಸಂಘಟನೆಗಳ ಪ್ರಮುಖರಾದ ವರಲಕ್ಷ್ಮಿ, ಮರಿಯಮ್ಮ, ರಮಾದೇವಿ, ಮಹ್ಮದ್ ಹನೀಫ್, ಕೆ.ಜಿ. ವೀರೇಶ, ಗೋಕುರಮ್ಮ, ಗಂಗಮ್ಮ, ಅಕ್ಕಮಹಾದೇವಿ, ವಿಶಾಲಾಕ್ಷಮ್ಮ, ಜರೀನಾಬೇಗಂ, ಅಲ್ಲಾಭಕ್ಷ, ಶರಣಮ್ಮ, ನಿಂಗಪ್ಪ, ಶ್ರೀಲೇಖಾ,ಶ್ರೀಧರ್, ಕಲಾಣಮ್ಮ ಸೇರಿ ಅನೇಕರು ಇದ್ದರು.