ಬಾಂಗ್ಲಾದೇಶದಲ್ಲಿ ಹಿಂದು ಯುವಕನನ್ನು ಮರಕ್ಕೆ ನೇತುಹಾಕಿ ಸಜೀವ ದಹನ ಮಾಡಿದ್ದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗದಳ ಸಂಘದಿಂದ ಬುಧವಾರ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ರವಿಕೃಷ್ಣ, ರವಿಕುಮಾರ, ಬಸವರಾಜ, ಬಸವ, ಶರಣಬಸವ, ನಾಗರಾಜ ಬಾಲ್ಕಿ, ಸಾಯಿರೆಡ್ಡಿ, ರಾಜೇಂದ್ರ ಹರವಿ, ಶರಣು, ಉದಯ್, ಸುನಿಲ್ ರೆಡ್ಡಿ, ಶ್ರೀನಿವಾಸ ಯಾದವ್, ಚಂದ್ರಶೇಖರ, ಮಂಜುನಾಥ ಇದ್ದರು.
ರಾಯಚೂರು ಬಾಂಗ್ಲಾದೇಶದಲ್ಲಿ ಹಿಂದು ಯುವಕನನ್ನು ಮರಕ್ಕೆ ನೇತುಹಾಕಿ ಸಜೀವ ದಹನ ಮಾಡಿದ್ದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗದಳ ಸಂಘದಿಂದ ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಹತ್ಯೆಯ ಹಿಂದೆ ಇರುವವರ ವಿರುದ್ಧ ಬಾಂಗ್ಲಾದೇಶದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮುಖ್ಯ ಸಲಹೆಗಾರ ಮಹ್ಮದ್ ಯೂನೂಸ್ ಪ್ರತಿಕೃತಿ ದಹಿಸಿದರು. ಪ್ರತಿಭಟನೆಯಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಜಿಹಾದಿಗಳಿಗೆ ಧಿಕ್ಕಾರ, ಧರ್ಮ ದ್ರೋಹಿಗಳಿಗೆ ಧಿಕ್ಕಾರ, ದೇಶದ್ರೋಹಿಗಳಿಗೆ ಧಿಕ್ಕಾರ ಎಂದು ಪ್ರತಿಭಟನಾನಿರತರು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರವಿಕೃಷ್ಣ, ರವಿಕುಮಾರ, ಬಸವರಾಜ, ಬಸವ, ಶರಣಬಸವ, ನಾಗರಾಜ ಬಾಲ್ಕಿ, ಸಾಯಿರೆಡ್ಡಿ, ರಾಜೇಂದ್ರ ಹರವಿ, ಶರಣು, ಉದಯ್, ಸುನಿಲ್ ರೆಡ್ಡಿ, ಶ್ರೀನಿವಾಸ ಯಾದವ್, ಚಂದ್ರಶೇಖರ, ಮಂಜುನಾಥ ಸೇರಿ ಅನೇಕರು ಇದ್ದರು.