ರಾಯಚೂರು
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷ ಣಾ ಕಾಯಿದೆ 2020ರ ಸಂವಿಧಾನದ ಆಶಯಕ್ಕೆ, ಹಿಂದೂ ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿದ್ದು,ವಿಧಾನ ಸಭೆಯಲ್ಲಿ ಮಂಡಿಸದಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳದಿಂದ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಸೆಕ್ಷನ್ 8 (4) ಕ್ಕೆ ತಿದ್ದುಪಡಿಯನ್ನು ಮಾಡಿ ನಿರ್ಣಯ ಕೈಗೊಂಡಿದನ್ನು ಖಂಡಿಸಿದರು. ರಾಜ್ಯದಲ್ಲಿ ಗೋವುಗಳು ವಾಹನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೂರವಾಗಿ ಸಾಗಾಣೆ ಮಾಡುತ್ತಿದ್ದು, ಹಣ ಆಸೆಗೆ ಸಾಗಾಣೆ ಮಾಡುತ್ತಿರುವುದು ಅತ್ಯಂತ ಹೀನವಾಗಿದೆ. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡದೇ ತಿದ್ದುಪಡಿ ಇದಕ್ಕೆ ವಿರುದ್ಧವಾಗಿ ಕಟುಕರಿಗೆ ಹಾಗೂ ಅಕ್ರಮ ಗೋವು ಕಳ್ಳರಿಗೆ ಸುಲಭವಾಗಿ ಸಾಗಾಟ ಮಾಡಲು ಅನುಕೂಲವಾಗುವಂತೆ ಸರ್ಕಾರದ ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಕಾಯಿದೆಯನ್ನು ತಿದ್ದುಪಡಿ ಮಾಡದಂತೆ ಕ್ರಮ ಕೈಗೊಂಡು ರಾಜ್ಯ ದಲ್ಲಿ ಕಾನೂನು ರೀತಿಯಲ್ಲಿ ಮಾತ್ರ ಜಾನುವಾರುಗಳನ್ನು ಸಾಗಾಟ ಮಾಡು ವಂತೆ ಕಾನೂನು ಮಾಡಬೇಕು ಎಂದು ಒತ್ತಾಯಿಸಿದರು.
ಈ ಕಾಯ್ದೆಯನ್ನು ಕೇವಲ ಜಾನುವಾರು ವಧೆ ನಿಷೇಧಿಸುವ ಉದ್ದೇಶ ಮಾತ್ರವಲ್ಲದೆ ಸಂರಕ್ಷಣಾ ಕಾಯಿದೆಯೂ ಆಗಬೇಕು. ಸಾಗಾಟದ ಸಮಯದಲ್ಲಿ ಜಾನುವಾರುಗಳಿಗೆ ವಾಹನದ ಮಾಲೀಕರು ಕ್ರೂರವಾಗಿ ಸಾಗಾಟ ನಿಲ್ಲಿಸಬೇಕು. ಗೋ ಹತ್ಯೆಗೆ ಪ್ರೋತ್ಸಾಹ ನೀಡದೇ ಗೋ ಸಂರಕ್ಷಣೆ ಕಾಯ್ದೆಯನ್ನು ಜಾರಗೊಳಿಸಿ ಸರ್ಕಾರ ಗೋವುಗಳನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ನಂತರ ಪ್ರತಿಭಟನೆ ಮೂಲಕ ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಿಲ್ಲಾಧಿಕಾರಿ ಕಚೇರಿಯ ಗ್ರೇಡ್ ತಹಸೀಲ್ದಾರ್ ಪರಶುರಾಮ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶ್ರಿ ಶಾಂತಮಲ್ಲಾ ಶಿವಾಚಾರ್ಯರು, ವಿಶ್ವ ಹಿಂದು ಪರಿಷತ್‌ನ ಜಿಲ್ಲಾಧ್ಯಕ್ಷ ಡಿ.ರವಿಕೃಷ್ಣಾ, ಕಾರ್ಯದರ್ಶಿ ರವಿ ಕುಮಾರ, ಪ್ರಮುಖರಾದ ನಾಗರಾಜ ಬಾಲ್ಕಿ,ನಿರಂಜನ ಮೂರ್ತಿ, ಹರೀಶ್,ಶ್ರೀನಿವಾಸ ಯಾದವ್, ಬಸವರಾಜ ಸಾಲಗುಂದ, ಶರಣ ಬಸವ, ಬಾಳಪ್ಪ ಪಾಟೀಲ್, ಪ್ರಶಾಂತ, ಶಿವುಕುಮಾರ, ಬಂಗಿ ಮುನಿರೆಡ್ಡಿ ಸೇರಿದಂತೆ ಅನೇಕರು ಇದ್ದರು.