ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4 ಕಾರ್ಮಿಕ ಕಾಯ್ದೆಗಳ ವಿರೋಧಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ಸಿಐಟಿಯುಸಿ ಸೇರಿದಂತೆ ವಿವಿಧ ಕೃಷಿ ಕೂಲಿ ಕಾರ್ಮಿಕರ ಸಂಘಟನೆಗಳಿಂದ ಗುರುವಾರ ಪ್ರತಿಭಟನೆ ಮಾಡಿದರು. ಪ್ರಮುಖರಾದ ಡಿಎಸ್.ಶರಣಬಸವ, ಎನ್.ಎಸ್. ವೀರೇಶ, ಮಹೇಶ ಚೀಕಲಪರ್ವಿ, ಹೆಚ್.ಪದ್ಮಾ, ಪ್ರಭಾಕರ ಪಾಟೀಲ್, ಶ್ರೀಶೈಲರೆಡ್ಡಿ, ಕಾಶಪ್ಪ, ಅಮೀರ್ ಅಲಿ, ಗೋವಿಂದ, ಸಲಾವುದ್ದಿನ್, ಎಂ.ರವಿ, ಎಂ.ಶರಣಗೌಡ, ಖಾಜಾ ಅಸ್ಲಂ, ಮಾರೆಪ್ಪ ವಕೀಲ, ಗೋಕುರಮ್ಮ, ಶರಣಮ್ಮ ಇದ್ದರು. 
ರಾಯಚೂರು

4 ಕಾರ್ಮಿಕ ಕಾಯ್ದೆಗಳ ವಿರೋಧಿಸಿ ಪ್ರತಿಭಟನೆ

ರಾಚಯ್ಯ ಸ್ವಾಮಿ

ರಾಯಚೂರು

ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4 ಕಾರ್ಮಿಕ ಕಾಯ್ದೆಗಳ ವಿರೋಧಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ಸಿಐಟಿಯುಸಿ ಸೇರಿದಂತೆ ವಿವಿಧ ಕೃಷಿ ಕೂಲಿ ಕಾರ್ಮಿಕರ ಸಂಘಟನೆಗಳಿಂದ ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

ಕೇಂದ್ರ ಸರ್ಕಾರ 4 ಕಾರ್ಮಿಕ ಕೋಡ್‌ಗಳನ್ನು ಜಾರಿಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಹಾಕಿದರು. ಕಾರ್ಮಿಕ ನೋಡ್‌ಗಳನ್ನು ಹಿಂಪಡೆದುಕೊಳ್ಳಬೇಕು, ರಾಜ್ಯ ಸರ್ಕಾರ 4 ಕಾರ್ಮಿಕ ಕೋಡ್‌ಗಳಿಗೆ ನಿಯಮಗಳನ್ನು ರೂಪಿಸದೇ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.

29 ಕಾರ್ಮಿಕ ಕಾಯ್ದೆಗಳನ್ನು 4 ಕಾರ್ಮಿಕ ಕೋಡ್‌ಗಳಾಗಿ ಜಾರಿಗೊಳಿಸಿ ಆರ್ಥಿಕ ಮತ್ತು ರಾಜಕಿ ಯ ದಾಳಿಯಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಕಾರ್ಮಿಕರು ಮುಷ್ಕರ ನಡೆಸಿದರೆ ದಂಡ, ಜೈಲು ಶಿಕ್ಷೆ, ವೇತನ ಕಡಿ ತಗೊಳಿಸಲಾಗುತ್ತದೆ ಎಂದು ಕಾರ್ಮಿಕರಿಗೆ ಬೆದರಿಕೆ ಹಾಕಿದಕ್ಕೆ ಆಕ್ರೋಶ ಹೊರ ಹಾಕಿದರು. ನರೇಗಾದಡಿ ಕೆಲಸದ ಹಕ್ಕನ್ನು ಕಸೆದುಕೊಂಡು ಗ್ರಾಮೀಣ ಜನರ ದುಡಿಯುವ ಹಕ್ಕನ್ನು ನಿಯಂತ್ರಣ ಮಾಡುವ ಮೂಲಕ ಗ್ರಾಮೀಣ ಜನರ ಜೀವನ ಕಸೆದುಕೊಂಡು ಬೀದಿ ಪಾಲಾಗುವಂತೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುಚ್ಛಕ್ತಿ ಖಾಸಗೀಕರಣ, ಪ್ರಸರಣ ಮತ್ತು ಅನುಷ್ಠಾನ ನಿರ್ವಹಣೆ ಖಾಸಗಿ ಬಂಡವಾಳಗಾರರಿಗೆ ನೀಡುವ ಮೂಲಕ ರೈತರು, ಜನ ಸಾಮಾನ್ಯರ ಸಬ್ಸಿಡಿಗೆ ಕಲ್ಲು ಹಾಕಿದೆ ಎಂದು ಕಿಡಿ ಕಾರಿದರು. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡದೇ ಕೃಷಿಯನ್ನು ಉತ್ತೇಜಿಸದೇ ಭೂ ಸ್ವಾದೀನ ಕಾಯ್ದೆ ಮೂಲಕ ರೈತ ಜಮೀನು ಕಸಿದುಕೊಳ್ಳುವ ಹುನ್ನಾರ ನಡೆದನ್ನು ಖಂಡಿಸಿದರು. 4 ಲೇಬರ್ ಕೋಡ್ ರದ್ದುಗೊಳಿಸಬೇಕು, ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ವಿ.ಜಿ ಗ್ರಾಮ್ ಜಿ ಕಾಯ್ದೆ ರದ್ದುಗೊಳಿಸಬೇಕು. ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿದರು.

ವಿಮಾ ತಿದ್ದುಪಡಿ ಕಾಯ್ದೆ., ಶಾಂತಿ ಕಾಯ್ದೆ ರದ್ದುಗೊಳಿಸಬೇಕು, ಕರ್ನಾಟಕ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಈಗ ತಂದಿರುವ ಗೆಜೆಟ್ ನೋಟಿಫಿಕೇಷನ್‌ನ್ನು ವಾಪಸ್ಸು ಪಡೆಯಬೇಕು. ಮತ್ತು ಒಕ್ಕೂಟ ಸರ್ಕಾರ ತಂದಿರುವ ಜನವಿರೋಧಿ ಮಸೂದೆಗಳನ್ನು ವಿರೋಧಿಸಬೇಕು. 2025 ಆಗಸ್ಟ್ ತಿಂಗಳಲ್ಲಿ ಕನಿಷ್ಠ ವೇತನ ಹೆಚ್ಚಳದ ಕುರಿತು ಕನಿಷ್ಠ ವೇತನ ಸಲಹಾ ಮಂಡಳಿ ನೀಡಿರುವ ಶಿಫಾರಸ್ಸುನ್ನು ಅಂತಿಮ ಅಧಿಸೂಚನೆಯಾಗಿ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಸಂಘಗಳು ಜಂಟಿ ಸಮಿತಿಯ ಪ್ರಮುಖರಾದ ಡಿಎಸ್.ಶರಣಬಸವ, ಎನ್.ಎಸ್. ವೀರೇಶ, ಮಹೇಶ ಚೀಕಲಪರ್ವಿ, ಹೆಚ್.ಪದ್ಮಾ, ಪ್ರಭಾಕರ ಪಾಟೀಲ್, ಶ್ರೀಶೈಲರೆಡ್ಡಿ, ಕಾಶಪ್ಪ, ಅಮೀರ್ ಅಲಿ, ಗೋವಿಂದ, ಸಲಾವುದ್ದಿನ್, ಎಂ.ರವಿ, ಎಂ.ಶರಣಗೌಡ, ಖಾಜಾ ಅಸ್ಲಂ, ಮಾರೆಪ್ಪ ವಕೀಲ, ಗೋಕುರಮ್ಮ, ಶರಣಮ್ಮ, ಈರಮ್ಮ, ಮಲ್ಲಮ್ಮ, ಮಲ್ಲನಗೌಡ, ರವಿ ಕುಮಾರ, ದೇವರಾಜ, ಸೇರಿ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ಬಾಕ್ಸ್
ಮುಷ್ಕರ ಹಿನ್ನಲೆಯಲ್ಲಿ ನಗರ ಸೇರಿದಂತೆ ಜಿಲ್ಲಾಧ್ಯಂತ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಜನ ಜೀವನ ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಿದವು. ನಗರದಲ್ಲಿ ಪ್ರತಿಭಟನಾಕಾರರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಮಾನವಿ ಮಾಡಿದರು ಯಾವುದೇ ಅಂಗಡಿ ಮಾಲೀಕರು ಪ್ರತಿಕ್ರಿಯೆ ನೀಡಲಿಲ್ಲ.