ಲಿಂಗಸುಗೂರು ಮೀನುಗಾರಿಕೆ ಕಚೇರಿ ಮೀನು ಪಾಲನಾಕೊಳಕ್ಕೆ ಇಲಾಖೆ ಜಂಟಿ ನಿರ್ದೇಶಕ ಶರಣಬಸವ ಬಳ್ಳಾರಿ ಭೇಟಿ ನೀಡಿದ್ದರು. ಉಪನಿರ್ದೇಶಕ ಬಸನಗೌಡ, ಸಹಾಯಕ ನಿರ್ದೇಶಕ ಚಂದ್ರಶೇಖರ, ಮೀನುಗಾರಿಕೆ ಕಚೇರಿ ಎಸ್‌ಡಿಎ ಮಾಳಪ್ಪ ಇದ್ದರು.  
ರಾಯಚೂರು

ವೈಜ್ಞಾನಿಕವಾಗಿ ಕೊಳಗಳ ಅಭವೃದ್ಧಿಗೆ ಪ್ರಸ್ತಾವನೆ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಮೀನು
  • ಮರಿ
  • ಪಾಲನಾ
ಲಿಂಗಸುಗೂರು: ಜಿಪಂ ಅನುದಾನದಲ್ಲಿ ಮೀನು ಮರಿ ಪಾಲನಾ ಕೊಳಗಳ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶರಣಬಸವ ಬಳ್ಳಾರಿ ಹೇಳಿದರು.
ಪಟ್ಟಣದ ಮೀನುಗಾರಿಕೆ ಕಚೇರಿಯಲ್ಲಿರುವ ಮೀನುಮರಿ ಪಾಲನಾ ಕೊಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಮೀನುಗಾರರ ಸಹಕಾರ ಸಂಘಗಳಿಗೆ ಗುತ್ತಿಗೆ ನೀಡಿ ಮೀನು ಮರಿಗಳನ್ನು ಬೆಳೆಸಿ ರೈತರಿಗೆ ನೀಡಲು ಅನುಕೂಲ ಮಾಡಿಕೊಡಲಾಗುತ್ತಿದೆ.
ಕರಡಕಲ್ ಕೆರೆಯನ್ನು ಸರಿಯಾಗಿ ಅಭಿವೃದ್ಧಿಪಡಿಸದ ಕಾರಣ ಮೀನುಮರಿ ಪಾಲನಾ ಕೊಳಗಳಿಗೆ ಸಮರ್ಪಕ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ವೈಜ್ಞಾನಿಕವಾಗಿ ಕೊಳಗಳ ಪ್ರಗತಿಗೆ ಜಿಪಂ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು. ಬೊಮ್ಮನಾಳ, ಹಿರೇನಗನೂರು, ದೇವನ ಹಳ್ಳ ಕೆರೆಗಳನ್ನು ಹೊರತುಪಡಿಸಿ ಉಳಿದ ಕೆರೆಗಳಲ್ಲಿ ಮೀನು ಉತ್ಪಾದನೆ ಮಾಡಿ ಮಾರಾಟ ಮಾಡಲು ಮೀನುಗಾರರ ಸಹಕಾರ ಸಂಘಗಳಿಗೆ ಗುತ್ತಿಗೆ ನೀಡಲಾಗಿದೆ ಎಂದರು.