ಕವಿತಾಳದ ಕಲ್ಮಠದ ಆವರಣದಲ್ಲಿ ಸನುದಾಯ ಭವನ ಕಾಮಗಾರಿಗೆ ಸಚಿವ ಎನ್.ಎಸ್. ಬೋಸರಾಜು, ಶಾಸಕ ಹಂಪಯ್ಯನಾಯಕ ಚಾಲನೆ ನೀಡಿದರು.  
ರಾಯಚೂರು

ಕವಿತಾಳ ಜನರಿಗೆ ಸೌಲಭ್ಯ ಕಲ್ಪಿಸಲು ಆದ್ಯತೆ

ಕವಿತಾಳ: ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಅಭಿವೃದ್ಧಿಗೆ ತಕ್ಕಂತೆ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಪಟ್ಟಣದ ಶಿವಪ್ಪ ತಾತನ ದೇವಸ್ಥಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣದ ಅಭಿವೃದ್ಧಿಗಾಗಿ ಒಟ್ಟು 1.75 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಜನರು ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಬೇಕು. ಮುಖ್ಯರಸ್ತೆ ನಿರ್ಮಾಣ ಮಾಡಲಾಗಿದೆ. ಕುಡಿವ ನೀರಿನ ಸಮಸ್ಯೆ ಪರಿಹರಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿ ಕಾಲೇಜು ಆರಂಭಿಸಲಾಗಿದೆ ಎಂದರು. 
ಶಾಸಕ ಹಂಪಯ್ಯ ನಾಯಕ ಮಾತನಾಡಿ, ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು. ಕಲ್ಮಠದ ಆವರಣದಲ್ಲಿ ಸಮುದಾಯ ಭವನ, ಮುಕ್ತಿಧಾಮ, ಶ್ರೀ ಆಂಜನೇಯ ದೇವಸ್ಥಾನ ಅಭಿವೃದ್ಧಿ, ಶಾದಿ ಮಹಲ್, ಚರ್ಚ್ ಆವರಣದಲ್ಲಿ ಮಳಿಗೆಗಳ ನಿರ್ಮಾಣಕ್ಕೆ ಸಚಿವರು ಚಾಲನೆ ನೀಡಿದರು. 
ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಕೆಡಿಪಿ ಸದಸ್ಯ ಶಿವಣ್ಣ ವಕೀಲ, ಪಪಂ ಸದಸ್ಯರಾದ ಮಲ್ಲಿಕಾರ್ಜುನಗೌಡ, ನಿಂಗರಾಜ ಕಂದಗಲ್, ಜಿಪಂ ಮಾಜಿ ಸದಸ್ಯ ಮಾಳಪ್ಪ, ರಾಜು ಬನ್ನಿಗಿಡದ, ಅಯ್ಯಪ್ಪ ನಿಲೋಗಲ್, ಕರಿಯಪ್ಪ, ತಿಪ್ಪಯ್ಯಸ್ವಾಮಿ, ಅಲ್ಲಮಪ್ರಭು, ಮೌನೇಶ ಕೊಡ್ಲಿ, ಅಪ್ಸರ್ ಪಾಷಾ, ರಫಿ ಒಂಟಿಬಂಡಿ, ಚಾಂದ್‌ಪಾಷಾ, ಶ್ರೀಶೈಲಪ್ಪ ಪಾಮನಕಲ್ಲೂರು, ಹನುಮಂತ ಪೇಂಟರ್, ಮೃತ್ಯುಂಜಯ್ಯಸ್ವಾಮಿ, ಮೌನೇಶ ಹಿರೇಕುರುಬರ ಇದ್ದರು.