ಮಾನ್ವಿಯ ಸಾರಿಗೆ ಘಟಕದಲ್ಲಿ ಚಾಲಕರ ದಿನ ಕಾರ್ಯಕ್ರಮದಲ್ಲಿ ಡಿಪೋ ವ್ಯವಸ್ಥಾಪಕ ನಾಗರಾಜ ಮಾತನಾಡಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ.ಅಂಬರೀಷಪ್ಪ ವಕೀಲ, ಡಾ.ರಮ್ಯಾ ವೀರವಲ್ಲಿ , ಸೀರಾಜುದ್ದೀನ್, ಬಸವರಾಜ ಗಡ್ಡಿ ಇತರರಿದ್ದರು.
ಮಾನ್ವಿ: ಚಾಲಕರು ರಸ್ತೆ ನಿಯಮಗಳನ್ನು ಪಾಲಿಸಿ ಅಪಘಾತ ರಹಿತ ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು ಎಂದು ಸಾರಿಗೆ ಘಟಕ ವ್ಯವಸ್ಥಾಪಕ ನಾಗರಾಜ ಹೇಳಿದರು.
ಪಟ್ಟಣದ ಸಾರಿಗೆ ಘಟಕದ ಆವರಣದಲ್ಲಿ ಭಾನುವಾರ ರಾಷ್ಟ್ರೀಯ ಚಾಲಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸುರಕ್ಷಿತ ಚಾಲನೆಗಾಗಿ ಧನ್ಯವಾದಗಳು ಕಾರ್ಯಕ್ರಮದಲ್ಲಿ ಮಾತನಾಡಿದರು. ಚಾಲಕ ವೃತ್ತಿ ಅತ್ಯಂತ ಗೌರವದಾಗಿದೆ. ಜಗತ್ತಿನ ಶ್ರೇಷ್ಠ ಸಾರಥಿ ಕೃಷ್ಣ ಪರಮಾತ್ಮನಾಗಿದ್ದ ಎಂದು ಪುರಾಣಗಳಲ್ಲಿ ವರ್ಣಿಸಲಾಗುತ್ತದೆ. ಕಲ್ಯಾಣ ಕರ್ನಾಟಕ ಸಾರಿಗೆಯು ಸರ್ಕಾರದ ಶಕ್ತಿ ಯೋಜನೆ, ವಿದ್ಯಾರ್ಥಿಗಳ ಉಚಿತ ಬಸ್‌ಪಾಸ್ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಉಪಯೋಗ ಜನರಿಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ.ಅಂಬರೀಷಪ್ಪ ವಕೀಲ ಮಾತನಾಡಿದರು. 2025-26ನೇ ಸಾಲಿನಲ್ಲಿ ಸುರಕ್ಷಿತ ಚಾಲನೆ ನಡೆಸಿದ ಬಸ್ ಚಾಲಕರನ್ನು ಸನ್ಮಾನಿಸಲಾಯಿತು.