ಲಿಂಗಸುಗೂರಿನಲ್ಲಿ ಕನಕದಾಸ ಜಯಂತಿ ಪೂರ್ವಭಾವಿ ಸಭೆ ನಡೆಯಿತು. ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ಪ್ರಮುಖರಾದ ರಾಘವೇಂದ್ರ ಕೊಪ್ಪದ, ಕುಪ್ಪಣ್ಣ ಕೊಡ್ಲಿ, ಬೀರಪ್ಪ ಪೂಜಾರಿ, ಪರಸಪ್ಪ ಹುನಕುಂಟಿ, ಗುಂಡಪ್ಪ ಕಾಚಾಪುರ ಇತರರಿದ್ದರು. 
ರಾಯಚೂರು

ಕನಕದಾಸರ ಜಯಂತಿಗೆ ಸಿದ್ಧತೆ ಕೈಗೊಳ್ಳಿ

ಶಶಿಧರ ಎಲ್

ಪ್ರಮುಖ ಮುಖ್ಯಾಂಶಗಳು

  • ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಸೂಚನೆ
  • ಜಯಂತಿ ಪೂರ್ವಭಾವಿ ಸಭೆ
ಲಿಂಗಸುಗೂರು: ಸಂತ ಶ್ರೇಷ್ಠ ಕನಕದಾಸ ಜಯಂತಿಯನ್ನು ನ.8ರಂದು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಸೂಚಿಸಿದರು.

ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ

ಪಟ್ಟಣದ ಸಹಾಯಕ ಆಯುಕ್ತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅಂದು ಬೆಳಗ್ಗೆ 9ಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಯಲಿದೆ. ನಂತರ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕನಕದಾಸರ ಕುರಿತು ಉಪನ್ಯಾಸ ಇರಲಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಬೇಕು ಎಂದು ಸೂಚಿಸಿದರು.
ತಾಲೂಕು ವೈದ್ಯಾಧಿಕಾರಿ ಅಮರೇಶ ಪಾಟೀಲ್, ತೋಟಗಾರಿಕೆ ಅಧಿಕಾರಿ ಶ್ರೀಶೈಲ ವಾಘಮೋರೆ, ಜೆಸ್ಕಾಂ ಎಇಇ ಬನ್ನೆಪ್ಪ ಕರಿಬಂಟನಾಳ, ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಷಡಕ್ಷರಿ ಹಾದಿಮನಿ, ಅರಣ್ಯಾಧಿಕಾರಿ ಭೀಮರಾಯ, ಉಪ ತಹಸೀಲ್ದಾರ್ ರಾಘವೇಂದ್ರ ಕೊಪ್ಪದ, ಸಿಡಿಪಿಒ ನಾಗರತ್ನಾ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಕುಪ್ಪಣ್ಣ ಕೊಡ್ಲಿ, ಪ್ರಮುಖರಾದ ಬೀರಪ್ಪ ಪೂಜಾರಿ, ಗುಂಡಪ್ಪ ಕಾಚಾಪುರ, ಮಲ್ಲಪ್ಪ ಹೆಸರೂರು ಇತರರಿದ್ದರು.