ಲಿಂಗಸುಗೂರಿನ ತಾಲೂಕು ಆಸ್ಪತ್ರೆಯಲ್ಲಿ ಟಿಎಚ್‌ಒ ಡಾ.ಅಮರೇಶ ಪಾಟೀಲ್‌ಗೆ ಮೃತಳ ಪತಿ ಹನುಮಂತ ಹಾಗೂ ಕುಟುಂಬಸ್ಥರು ಮನವಿ ಸಲ್ಲಿಸಿದರು. ಬಸಪ್ಪ ಹಿರೇಕುರುಬರ ಶೀಲಹಳ್ಳಿ, ಹನುಮಂತಪ್ಪ, ನಾಗಪ್ಪ ಈಚನಾಳ, ಹುಲಗಪ್ಪ ಕುಣೆಕೆಲ್ಲೂರು ಇತರರಿದ್ದರು. 
ರಾಯಚೂರು

ವೈದ್ಯರ ನಿರ್ಲಕ್ಷೃದಿಂದ ಗರ್ಭಿಣಿ ಸಾವು

ಲಿಂಗಸುಗೂರು: ವೈದ್ಯರ ನಿರ್ಲಕ್ಷೃದಿಂದ ಹೆರಿಗೆ ವೇಳೆ ಮಹಿಳೆ ಮೃತಪಟ್ಟಿದ್ದಾರೆಂದು ಆರೋಪಿಸಿ ಮೃತಳ ಪತಿ ಸೇರಿ ಕುಟುಂಬ ಸದಸ್ಯರು ಭಾನುವಾರ ಟಿಎಚ್‌ಒ ಡಾ.ಅಮರೇಶ ಪಾಟೀಲ್‌ಗೆ ಮನವಿ ಸಲ್ಲಿಸಿದರು.
ಶೀಲಹಳ್ಳಿ ಗ್ರಾಮದ ಗರ್ಭಿಣಿ ಕಾವೇರಿ (25) ಹೆರಿಗೆಗಾಗಿ ಶುಕ್ರವಾರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ.ಪವನಕುಮಾರ ತಪಾಸಣೆ ಮಾಡಿದ್ದಾರೆ. ನಂತರ ಸಿಸೇರಿಯನ್ ಮಾಡುವ ಸಂದರ್ಭದಲ್ಲಿ ರಕ್ತಸ್ರಾವವಾಗಿದೆ. ಎರಡು ಬಾಟಲ್ ರಕ್ತ ನೀಡಿದ್ದಾರೆ.
ನಂತರ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಅಲ್ಲಿಯೂ ರಕ್ತ ನೀಡಿದ್ದಾರೆ. ಆದರೂ ರಕ್ತಸ್ರಾವ ನಿಲ್ಲದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಡಾ.ಪವನಕುಮಾರ ಹಾಗೂ ನರ್ಸ್‌ಗಳ ನಿರ್ಲಕ್ಷೃದಿಂದ ಕಾವೇರಿ ಮೃತಪಟ್ಟಿದ್ದು, ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.