ದೇವದುರ್ಗದ ತಾಲೂಕು ಆಡಳಿತಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ದೇವರ ದಾಸಿಮಯ್ಯ ಜಯಂತಿ ಸೋಮವಾರ ಆಚರಣೆ ಮಾಡಲಾಯಿತು. ಕಂದಾಯ ನಿರೀಕ್ಷಕ ದೇವರೆಡ್ಡಿ, ನೌಕರರಾದ ಪ್ರವೀಣ್‌ಕುಮಾರ್, ಅಮರೇಶ, ಅಭಿಷೇಕ, ಶ್ರೀಶೈಲ, ಜ್ಯೋತಿ, ಪಾರ್ವತಿ, ಗಂಗಮ್ಮ, ಕವಿತಾ ಇತರರಿದ್ದರು.
ದೇವದುರ್ಗ: ಆದ್ಯ ವಚನಕಾರ ದೇವರ ದಾಸಿಮಯ್ಯ ಸೇರಿ 12ನೇ ಶತಮಾನದ ಬಸವಾದಿ ಶರಣರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ತಾಲೂಕು ಆಡಳಿತಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ ಸೋಮವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವರ ದಾಸಿಮಯ್ಯ ಕಾಯಕ ಯೋಗಿ. ರಾಮನಾಥ ಎಂಬ ನಾಮಾಂಕಿತದಿಂದ ವಚನ ಗಳನ್ನು ರಚಿಸಿ ವಚನ ಸಾಹಿತ್ಯಕ್ಕೆ ತಮ್ಮದೇ ಸೇವೆ ಸಲ್ಲಿಸಿದ್ದಾರೆ.
ದಾಸಿಮಯ್ಯನವರು ಧಾರ್ಮಿಕ ಪ್ರಜ್ಞೆಯನ್ನು ವಚನಗಳ ಮೂಲಕ ಸಾರಿದ್ದಾರೆ. ಆರಾಧ್ಯ ದೈವನಾದ ರಾಮನಾಥ ಎಂಬ ಹೆಸರಿನಲ್ಲಿ 176 ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸ್ತ್ರೀ ಸಂವೇದನೆಗೆ ಆದ್ಯತೆ ನೀಡಲಾಗಿದೆ. ಹೆಣ್ಣನ್ನು ದೇವತೆಯಾಗಿ ಕಾಣಬೇಕು. ಪರಸ್ತ್ರೀಯರನ್ನು ಗೌರವಿಸಬೇಕು ಎನ್ನುವುದು ಇವರ ವಚನಗಳ ನಿಲುವಾಗಿತ್ತು. ಶರಣರ ಆದರ್ಶಗಳನ್ನು ಬದುಕಿಗೆ ದಾರಿದೀಪವಾಗಿವೆ ಎಂದರು.
ಕಂದಾಯ ನಿರೀಕ್ಷಕ ದೇವರೆಡ್ಡಿ, ಕಚೇರಿ ನೌಕರರಾದ ಪ್ರವೀಣ್‌ಕುಮಾರ್, ಅಮರೇಶ, ಅಭಿಷೇಕ, ಶ್ರೀಶೈಲ, ಜ್ಯೋತಿ, ಪಾರ್ವತಿ, ಗಂಗಮ್ಮ, ಕವಿತಾ, ಸರಸ್ವತಿ, ಲಕ್ಷ್ಮೀ ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ಪ್ರಕಾಶ ನೀಲಿ, ಮಲ್ಲಿಕಾರ್ಜುನ ಕೊಂಗಿ, ರಾಜಶೇಖರ ಗುಂಡಿ, ಮಲ್ಲೇಶ ಮಾಶೆಟ್ಟಿ, ಶಿವರಾಜ, ಆದಿ ಗಂಗಾಧರ ಇತರರಿದ್ದರು.