ಸಿಂಧನೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ಮುಸ್ಲಿಮರು ಬಡಿಬೇಸ್ ಮಸ್ಜಿದ್‌ನಿಂದ ಈದ್ಗಾವರೆಗೆ ಮೆರವಣಿಗೆ ನಡೆಸಿದರು. 
ರಾಯಚೂರು

ಉತ್ತಮ ಮಳೆ ಕರುಣಿಸುವಂತೆ ಪ್ರಾರ್ಥನೆ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಜಾನುವಾರು
  • ನೀರು
  • ಮೇವು
ಸಿಂಧನೂರು: ಈದ್ಗಾ ಮೈದಾನದಲ್ಲಿ ಮುಸ್ಲಿಮರು ಶುಕ್ರವಾರ ಮಳೆಗಾಗಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ನಮಾಜ್ ಮಾಡಿದರು.
ಬಡಿಬೇಸ್ ಮಸ್ಜಿದ್‌ನಿಂದ ಮೆರವಣಿಗೆ ಮೂಲಕ ತೆರಳಿ ಈದ್ಗಾ ತಲುಪಿ, ಮಳೆಯ ಕೊರತೆಯಿಂದ ರೈತರು ಸೇರಿದಂತೆ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದು, ಮಳೆಯಾಗಿ ಉತ್ತಮಫಸಲು ಬರಲಿ ಎಂದು ಪ್ರಾರ್ಥಿಸಿದರು.
ಈದ್ಗಾ ಕಮಿಟಿ ಅಧ್ಯಕ್ಷ ಸೈಯದ್ ಹಾರೂನ್ ಜಾಹಗೀರ್ ದಾರ್ ಮಾತನಾಡಿ, ಮಳೆಗಾಲ ಆರಂಭವಾಗಿ 2-3ತಿಂಗಳು ಮುಗಿಯುತ್ತಿದ್ದರೂ ತಾಲೂಕಿನಲ್ಲಿ ಉತ್ತಮ ಮಳೆಯಾಗದೇ ಇರುವುದರಿಂದ ಕೆರೆ, ಹಳ್ಳ, ಕೊಳ್ಳಗಳು ಬತ್ತಿವೆ. ಜಾನುವಾರುಗಳಿಗೆ ನೀರು, ಮೇವು ದೊರಕುತ್ತಿಲ್ಲ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತಮ ಮಳೆ ಕರುಣಿಸುವಂತೆ ದೇವರನ್ನು ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.
ಮೌಲಾನಾಗಳಾದ ತಾಜುಮುದ್ದೀನ್, ಮೆಹಬೂಬ್ ಮುಳ್ಳೂರು, ಗಫೂರ್ ಸಾಬ್, ಜಾಫರ್ ಸಾಬ್, ಉಸಮಾನ್ ಸಾಬ್, ಮುಖಂಡರಾದ ಕೆ.ಜಿಲಾನಿಪಾಷಾ, ಜಾಫರ್ ಅಲಿ ಜಾಹಗೀರ್‌ದಾರ್, ಟಿ.ಹುಸೇನ ಸಾಬ್, ಶಪ್ಪುವುಲ್ಲಾ ಖಾನ್, ಮಹ್ಮದ್ ಸಾಬ್, ಎಸ್.ಎಂ.ಖಾದ್ರಿ ಸಾಲಗುಂದಾ ಇತರರಿದ್ದರು.