ಗುರುಗುಂಟಾ-ಹಟ್ಟಿ ಒಳರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣು ಹಾಕುತ್ತಿರುವ ಕನ್ನಡ ಸೇನೆ ಕರ್ನಾಟಕ ಕಾರ್ಯಕರ್ತರು. 
ರಾಯಚೂರು

ರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣು

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸೇನೆ ಕರ್ನಾಟಕ ಕಾರ್ಯಕರ್ತರಿಂದ ದುರಸ್ತಿ
  • ಗುರುಗುಂಟಾ ದುರಸ್ತಿಗೆ ಕ್ರಮವಹಿಸದ ಅಧಿಕಾರಿ-ಜನಪ್ರತಿನಿಧಿಗಳು
ಗುರುಗುಂಟಾ: ಹದಗೆಟ್ಟು ಗುಂಡಿ ಬಿದ್ದ ಗುರುಗುಂಟಾ-ಹಟ್ಟಿ ಒಳರಸ್ತೆಗೆ ಕನ್ನಡ ಸೇನೆ ಕರ್ನಾಟಕ ಕಾರ್ಯಕರ್ತರು ಮಣ್ಣು ಹಾಕಿಸಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೊಳಿಸಿದ್ದಾರೆ.
ಹಟ್ಟಿ ಚಿನ್ನದ ಗಣಿ ಕಾರ್ಮಿಕರು, ನಾಡಕಚೇರಿ, ರೈತ ಸಂಪರ್ಕ ಕೆಲಸಕ್ಕೆ ತೆರಳುವವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ನೌಕರರು ಹಾಗೂ ಅಗತ್ಯ ಕೆಲಸಕ್ಕೆ ತೆರಳುವವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ನಿತ್ಯ ಹಟ್ಟಿ, ಗುರುಗುಂಟಾಕ್ಕೆ ತೆರಳುವ ಸುತ್ತಲಿನ ಹಳ್ಳಿ, ದೊಡ್ಡಿ, ತಾಂಡಾ ಜನರು ಹಾಗೂ ನೂರಾರು ವಾಹನಗಳು ಈ ಹದಗೆಟ್ಟ ರಸ್ತೆ ಮೂಲಕ ಪ್ರಯಾಸದೊಂದಿಗೆ ಪ್ರಯಾಣಿಸಬೇಕಿತ್ತು. ಈ ಬಗ್ಗೆ ಧರಣಿ, ಪ್ರತಿಭಟನೆ ನಡೆಸಿದರೂ ರಸ್ತೆ ದುರಸ್ತಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮವಹಿಸದ ಕಾರಣ ಕನ್ನಡ ಸೇನೆ ಕರ್ನಾಟಕ ಸಂಘಟನೆ ಕಾರ್ಯಕರ್ತರು ರಸ್ತೆಯ ಗುಂಡಿಗಳಿಗೆ ಗುರುಗುಂಟಾದಿಂದ ಕೋಟಾದವರೆಗೆ(4 ಕಿಮೀ) ಮಣ್ಣು ಹಾಕಿ ಮುಚ್ಚಿದ್ದು, ಪ್ರಯಾಣಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಉಪಾಧ್ಯಕ್ಷ ಶರಣೋಜಿ ಪವಾರ್, ಲಿಂಗಸುಗೂರು ತಾಲೂಕ ಅಧ್ಯಕ್ಷ ಶಿವು ಕೆಂಪ ಹಾಗೂ ಕಾರ್ಯಕರ್ತರು ಇದ್ದರು.