ಲಿಂಗಸುಗೂರು ಪಿಕಾರ್ಡ್ ಬ್ಯಾಂಕ್ ಸದಸ್ಯರ ಚುನಾವಣೆಯಲ್ಲಿ ಬಯ್ಯಪೂರ ಕಾಂಗ್ರೆಸ್ ಬೆಂಬಲಿತ ಮುದಗಲ್ಲ ಕ್ಷೇತ್ರದ ಹುಸೇನಪ್ಪ, ಲಿಂಗಸುಗೂರು ಪೂರ್ಣ ಕ್ಷೇತ್ರದ ಸಿದ್ರಾಮೇಶ ಅವರನ್ನು ಎಂಎಲ್‌ಸಿ ಶರಣಗೌಡ ಪಾಟೀಲ್ ಬಯ್ಯಪೂರ ಸನ್ಮಾನಿಸಿದರು. ಭೂಪನಗೌಡ ಪಾಟೀಲ್, ಪಾಮಯ್ಯ ಮುರಾರಿ, ಶಶಿಧರ ಪಾಟೀಲ್ ಆಶಿಹಾಳ, ಗುಂಡಪ್ಪ ನಾಯಕ, ಚನ್ನಾರೆಡ್ಡಿ ಬಿರಾದಾರ, ಶರಣಬಸವ ವ್ಯಾಕರನಾಳ, ಸಂಗಮೇಶ ಕನ್ನಾಳ, ತಿಮ್ಮನಗೌಡ, ರಾಜು ಪಾಟೀಲ್, ರಾಮನಗೌಡ, ರಮೇಶ ಪಾಗದ, ಹನಮಂತ ಹುಳೆಮಸೂರು ಇದ್ದರು.
ಪಿಕಾರ್ಡ್ ಬ್ಯಾಂಕ್ ಸದಸ್ಯರ ಆಯ್ಕೆ
ಲಿಂಗಸುಗೂರು: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸದಸ್ಯರ ಆಯ್ಕೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ 11 ಜನ ಆಯ್ಕೆಯಾದರು.
ಸಾಮಾನ್ಯ ಸಾಲಗಾರರಲ್ಲದ ಲಿಂಗಸುಗೂರು ಕ್ಷೇತ್ರದಿಂದ ಸಿದ್ರಾಮೇಶ ಚನ್ನವೀರಪ್ಪ ಆದಾಪೂರ, ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಚನ್ನಬಸಪ್ಪ ಚನ್ನವೀರಪ್ಪ, ಆನೆಹೊಸೂರು ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಸನಗೌಡ ಸಂಗಣ್ಣ ಮೇಟಿ, ನಿಲೋಗಲ್ಲ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಶಿವನಗೌಡ ಸಿದ್ದನಗೌಡ, ಮಾವಿನಭಾವಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ವೆಂಕನಗೌಡ ಗುರುಲಿಂಗಗೌಡ, ನಾಗರಹಾಳ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ವಿರೂಪಾಕ್ಷಪ್ಪ ದೇವೇಂದ್ರಪ್ಪ ಹಿರೇಲೆಕ್ಕಿಹಾಳ, ನಾಗಲಾಪೂರ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸಿದ್ದನಗೌಡ ಬಸನಗೌಡ ಮಾಕಾಪೂರ, ಗುರುಗುಂಟ ಪರಿಶಿಷ್ಟ ಪಂಗಡ ಸಾಲಗಾರರ ಕ್ಷೇತ್ರದಿಂದ ಭೀಮರಾಯ ಬಾಲಪ್ಪ ಯರಗೋಡಿ, ಮುದಗಲ್ಲ ಪರಿಶಿಷ್ಟ ಜಾತಿ ಸಾಲಗಾರರ ಕ್ಷೇತ್ರದಿಂದ ಹುಸೇನಪ್ಪ ಹನುಮಪ್ಪ, ಲಿಂಗಸುಗೂರು ಸಾಲಗಾರರ ಮಹಿಳಾ ಕ್ಷೇತ್ರದಿಂದ ಯಂಕಮ್ಮ ಯಂಕಪ್ಪ ಭೂಪೂರ, ಮಸ್ಕಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಮಲ್ಲಿಕಾರ್ಜುನ ಶರಣಪ್ಪ ಪರಡ್ಡಿ ಮೆದಕಿನಾಳ ಆಯ್ಕೆಯಾಗಿದ್ದಾರೆ.