ಮುಷ್ಟೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕಿ ಕರೆಮ್ಮ ನಾಯಕ ಭೂಮಿ ಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ಧನಂಜಯ್ಯ ಶಿವಂಗಿ, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಟಿಎಚ್‌ಒ ಡಾ.ಬನದೇಶ್ವರ, ಮರೆಪ್ಪ ಪೂಜಾರಿ ಇತರರಿದ್ದರು. 
ರಾಯಚೂರು

ಗುಣಮಟ್ಟದಿಂದ ಕಾಮಗಾರಿ ನಿರ್ವಹಿಸಿ

ನರೇಶ್ ಕುಮಾರ್
ಅರಕೇರಾ: ಶಿಕ್ಷಣ, ಆರೋಗ್ಯ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಅನುದಾನ ತರಲು ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕಿ ಕರೆಮ್ಮ ನಾಯಕ ಹೇಳಿದರು. 
ತಾಲೂಕಿನ ಮುಷ್ಟೂರು ಗ್ರಾಮದ ಸರ್ಕಾರಿ ಮಾಹಿಪ್ರಾ ಶಾಲೆಯಲ್ಲಿ ಕೆಕೆಆರ್‌ಡಿಬಿ ಅಡಿಯಲ್ಲಿ 28 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಎರಡು ಕೊಠಡಿ, ಆರೋಗ್ಯ ಇಲಾಖೆ ಅಡಿಯಲ್ಲಿ 2.80 ಕೋಟಿ ರೂ. ವೆಚ್ಚದಲ್ಲಿ ಪಿಎಚ್‌ಸಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಶುಕ್ರವಾರ ಮಾತನಾಡಿದರು. 
ಶಾಲೆಗೆ ಸುಸಜ್ಜಿತ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಈ ಭಾಗದ ಜನರ ಬಹುದಿನ ಬೇಡಿಕೆಯಾಗಿತ್ತು. ಸುತ್ತಲಿನ ಹತ್ತಾರು ಹಳ್ಳಿ ಜನರಿಗೆ ಆರೋಗ್ಯ ಸೇವೆ ಸಕಾಲಕ್ಕೆ ಸಿಗುತ್ತದೆ. ನುರಿತ ವೈದ್ಯರು, ವೈದ್ಯಕೀಯ ಸಲಕರಣೆಗಳು, ಮೂಲ ಸೌಕರ್ಯ ಒದಗಿಸಲಾಗುವುದು. ಗುತ್ತಿಗೆದಾರರು ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸಬೇಕು. ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು. 
ಪ್ರಮುಖರಾದ ಗಂಗಪ್ಪ ಗೌಡ, ಸಿದ್ದಣ್ಣ ದೊಂಡಂಬಳಿ, ಗೋವಿಂದರಾಜ ನಾಯಕ, ಮಂಜುನಾಥ, ಇಸಾಕ್ ಮೇಸ್ತ್ರಿ, ಶಿವಜಾತಯ್ಯ ಸ್ವಾಮಿ, ಬಸನಗೌಡ ದೇಸಾಯಿ, ಸಿದ್ದಲಿಂಗಪ್ಪ ಗೌಡ, ಚಂದ್ರಾಹಾಸ ಚಿಂತಲಕುಂಟಾ, ಗುರುನಾಥ ರೆಡ್ಡಿ, ಚನ್ನಪ್ಪ ಮಸೀದಾಪುರ, ಶರಣಗೌಡ ಸುಂಕೇಶ್ವರಹಾಳ, ಮಹಿಬೂಬ ಹೆಗ್ಗಡದಿನ್ನಿ, ರಂಗಪ್ಪ ಗಾಲಿ, ಬಸವರಾಜ ನಾಯಕ ಇತರರಿದ್ದರು.