ಉಮಲೂಟಿಯಲ್ಲಿ 24 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೂಮಿಪೂಜೆ ನೆರವೇರಿಸಿದರು. ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಮಾಜಿ ನಿರ್ದೇಶಕ ಶಂಕರಗೌಡ ಉಮಲೂಟಿ, ಯಮನೂರ, ವೀರಭದ್ರಗೌಡ ಉಮಲೂಟಿ, ಮುದ್ದನಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಬೇಗಂ ಹವಾಲ್ದಾರ್ ಇತರರಿದ್ದರು.
ಸಿಂಧನೂರು: ಗುಣಮಟ್ಟದ ರಸ್ತೆಗಳನ್ನು ನಿರ್ವಹಿಸಬೇಕು. ಬೇಕಾಬಿಟ್ಟಿಯಾಗಿ ನಿರ್ಮಾಣ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಸೂಚಿಸಿದರು.
ಬುಕ್ಕನಹಟ್ಟಿ ಗ್ರಾಮದ ಎಸ್ಸಿ-ಎಸ್ಟಿ ವಾರ್ಡ್‌ನಲ್ಲಿ 24ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಉಮಲೂಟಿಯಲ್ಲಿ ಶ್ರೀ ಆಂಜನೇಯ ದೇವಸ್ಥಾನ ಪಕ್ಕದಲ್ಲಿ 50ಲಕ್ಷ ರೂ. ವೆಚ್ಚದ ಸಮುದಾಯ ನಿರ್ಮಾಣ ಹಾಗೂ ಗೊರಲೂಟಿ ಗ್ರಾಮದಲ್ಲಿ 10.56 ಲಕ್ಷ ರೂ. ಸಿಸಿ ರಸ್ತೆ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಹಿಂದೆ ನಿರ್ಮಿತಿ ಕೇಂದ್ರದಿಂದ ನಿರ್ಮಾಣ ಮಾಡಿದ ಕಾಮಗಾರಿಗಳಲ್ಲಿ ದೋಷ ಕಂಡು ಬಂದಿದೆ. ಈಗ ಅದಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರ ಮಂಜೂರು ಮಾಡಿದ ಅನುದಾನ ಸದ್ಬಳಕೆಯಾಗಬೇಕು. ಜನರಿಗೆ ಇದರ ಸೌಲಭ್ಯ ಮುಟ್ಟಬೇಕು. ಯಾವುದೇ ಕಾರಣಕ್ಕೆ ಕಳಪೆ ಕಾಮಗಾರಿಗೆ ಅವಕಾಶ ಇಲ್ಲ ಎಂದರು.
ಪ್ರಮುಖರಾದ ಭೀಮಣ್ಣ ಉಪ್ಪಲದೊಡ್ಡಿ, ಹುಲುಗಪ್ಪ ಉಪ್ಪಲದೊಡ್ಡಿ, ಪರಸಪ್ಪ, ಶಿವರಾಜ, ಮಲ್ಲಯ್ಯ, ವಿರುಪಣ್ಣ, ಹನುಮಂತ, ಅರವಿಂದರಡ್ಡಿ ಇತರರಿದ್ದರು.