ದೇವದುರ್ಗದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ವಿಶ್ವ ಕ್ಷಯರೋಗ ದಿನ ಹಾಗೂ ಜಾಗೃತಿ ಜಾಥಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ವೈದ್ಯಾಧಿಕಾರಿ ಡಾ.ಗಂಗಾಧರ್, ಆಯುಷ್ ವೈದ್ಯಾಧಿಕಾರಿ ಡಾ.ನಿರ್ಮಲಾ, ಡಾ.ನಾಗರಾಜ್, ಸಿಬ್ಬಂದಿ ಚನ್ನಬಸಯ್ಯ ಸ್ವಾಮಿ, ಕ್ಷಯರೋಗ ಮೇಲ್ವಿಚಾರಕ ರವಿ ಶುಕ್ಲ ಇತರರಿದ್ದರು.
ರೋಗಮುಕ್ತ ಭಾರತಕ್ಕೆ ಜನರ ಸಹಕಾರ ಅಗತ್ಯ
ದೇವದುರ್ಗ: ಕ್ಷಯಮುಕ್ತ ಭಾರತ ನಿರ್ಮಾಣಕ್ಕೆ ಸರ್ಕಾರ ಆಯೋಜಿಸಿದ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ಈ ಅಭಿಯಾನಕ್ಕೆ ಜನರ ಸಹಕಾರ ಅಗತ್ಯ ಎಂದು ವೈದ್ಯಾಧಿಕಾರಿ ಡಾ.ಗಂಗಾಧರ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷಯರೋಗ ಹರಡದಂತೆ ಜಾಗೃತಿವಹಿಸಬೇಕು. ಆರೋಗ್ಯ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಕ್ಷಯರೋಗದ ಲಕ್ಷಣಗಳು ಕಂಡುಬಂದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಬೇಕು. 6 ತಿಂಗಳವರೆಗೆ ಔಷಧ, ಪೌಷ್ಟಿಕ ಆಹಾರ ಸೇವಿಸಿದರೆ ಟಿಬಿ ರೋಗ ಗುಣವಾಗುತ್ತದೆ.
ಕೆಮ್ಮುವಾಗ, ಸೀನುವಾಗ ಮುಖಕ್ಕೆ ಮಾಸ್ಕ್, ಕರವಸ್ತ್ರ ಬಳಸಿ ರೋಗ ಹರಡದಂತೆ ತಡೆಗಟ್ಟಬೇಕು. ಸರ್ಕಾರದ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ ಎಂದರು.
ಆಯುಷ್ ವೈದ್ಯಾಧಿಕಾರಿ ನಿರ್ಮಲಾ, ಡಾ.ನಾಗರಾಜ್, ಆರೋಗ್ಯ ಇಲಾಖೆ ಸಿಬ್ಬಂದಿ ಚನ್ನಬಸಯ್ಯ ಸ್ವಾಮಿ, ಕ್ಷಯರೋಗ ಮೇಲ್ವಿಚಾರಕ ರವಿ ಶುಕ್ಲ, ಪ್ರಮುಖರಾದ ಸಂಗಮ್ಮ, ಓಂಕಾರ ಜಂತೇಕರ್, ತ್ಯಾಗರಾಜ್, ವಿಶ್ವನಾಥ್, ನಂದಕುಮಾರ್, ಜೀವನ್, ರವಿಕುಮಾರ್, ಮಹಾದೇವಿ, ಪ್ರಭು, ಶರಣು, ರವಿಕುಮಾರ್, ಆರೋಗ್ಯ ಮಿತ್ರ ಹನುಮೇಶ್ ಇತರರಿದ್ದರು.