ದೇವದುರ್ಗದ ಐದನೇ ವಾರ್ಡ್‌ನಲ್ಲಿ ಆಯೋಜಿಸಿದ್ದ ಪುರಸಭೆ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಸುಭಾಶ್ಚಂದ್ರ ಪಾಟೀಲ್ ಮಾತನಾಡಿದರು. ಮಾಜಿ ಸೈನಿಕ ಪಂಪಣ್ಣ ಅಕ್ಕರಕಿ, ಮುಖ್ಯಾಧಿಕಾರಿ ಕೆ.ಹಂಪಯ್ಯ, ಸಹಾಯಕ ಇಂಜಿನಿಯರ್ ಶರಣಪ್ಪ, ವೆಂಕಟೇಶ ನಾಯಕ, ಶಿವರಾಜ ಗೆಜ್ಜೆಬಾವಿ, ಹನುಮಂತ, ಮಧು ಉಭಾಳೆ, ಮಲ್ಲಪ್ಪ ಗೌಡೂರು, ರಂಗನಾಥ ಇತರರಿದ್ದರು. 
ರಾಯಚೂರು

ಅಭಿವೃದ್ಧಿಗೆ ಜನರ ಸಹಕಾರವೂ ಅಗತ್ಯ

ನರೇಶ್ ಕುಮಾರ್
ದೇವದುರ್ಗ: ಸಮಾಜದ ಪ್ರತಿಯೊಂದು ಕೆಲಸಕ್ಕೂ ಸರ್ಕಾರ ಹಾಗೂ ಅಧಿಕಾರಿಗಳನ್ನು ಅವಲಂಬಿಸುವುದು ಸರಿಯಲ್ಲ. ಸ್ವಚ್ಛತೆ, ಪರಿಸರ ಸಂರಕ್ಷಣೆ ಸೇರಿ ಅಭಿವೃದ್ಧಿ ಕೆಲಸಗಳಿಗೆ ಜನರ ಸಹಕಾರವೂ ಅಗತ್ಯವಾಗಿದೆ ಎಂದು ಮಾಜಿ ಸೈನಿಕ ಪಂಪಣ್ಣ ಅಕ್ಕರಕಿ ಹೇಳಿದರು.
ಪಟ್ಟಣದ ಐದನೇ ವಾರ್ಡ್‌ನಲ್ಲಿ ಸಮಸ್ಯೆಗೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು. ದೇಶ ನಮಗೆ ಎಲ್ಲವನ್ನೂ ಕೊಟ್ಟಿದೆ. ಅದನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. 
ನಗರದ ಸ್ವಚ್ಛತೆ, ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಸೇರಿ ಪ್ರತಿಯೊಂದು ಕೆಲಸಕ್ಕೆ ಪುರಸಭೆಯತ್ತ ಬೊಟ್ಟು ಮಾಡುವುದು ಸರಿಯಲ್ಲ. ನಾಗರಿಕರಾದ ನಾವು ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು. 
ಸಹಾಯಕ ಪ್ರಾಧ್ಯಾಪಕ ಸುಭಾಶ್ಚಂದ್ರ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಸಹಾಯಕ ಇಂಜಿನಿಯರ್ ಶರಣಪ್ಪ, ವೆಂಕಟೇಶ ನಾಯಕ, ಶಿವರಾಜ ಗೆಜ್ಜೆಬಾವಿ, ಹನುಮಂತ, ಮಧು ಉಭಾಳೆ, ಮಲ್ಲಪ್ಪ ಗೌಡೂರು, ರಂಗನಾಥ ಇತರರಿದ್ದರು.