ಲಿಂಗಸುಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಸ್ಥಾನ ಕೊಂಡ (ಪುಷ್ಕರಣಿ)ದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು.
ಲಿಂಗಸುಗೂರು: ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ನಿಮಿತ್ತ ಗುರುವಾರ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕ್ಷೇತ್ರಗಳಲ್ಲಿ ಜನರು ಪುಣ್ಯಸ್ನಾನ ಮಾಡಿದರು.
ಗುರುಗುಂಟಾದ ಶ್ರೀ ಅಮರೇಶ್ವರ ದೇವಸ್ಥಾನ ಕೊಂಡದಲ್ಲಿ ಸಾವಿರಾರು ಭಕ್ತರು ಮಿಂದು ದೇವರ ದರ್ಶನ ಪಡೆದರು. ಕೃಷ್ಣಾ ತೀರದಲ್ಲಿರುವ ನವಿಲೆಯ ಜಡೆಯ ಶಂಕರಲಿಂಗ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಇದು ಆದ್ಯ ವಚನಕಾರ ದೇವರ ದಾಸೀಮಯ್ಯನ ಗುರು ಶಂಕರ ದಾಸಿಮಯ್ಯನ ಕರ್ಮಭೂಮಿ. ದೇವಸ್ಥಾನಕ್ಕೆ ಹೊಂದಿಕೊಂಡ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಜನರು ಪುಣ್ಯಸ್ನಾನ ಮಾಡಿದರು.