ದೇವದುರ್ಗ ತಾಪಂ ಇಒ ಕೆ.ರಾಜೇಂದ್ರಕುಮಾರಗೆ ಗ್ರಾಪಂ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಪ್ರಮುಖರಾದ ಶಿವಶರಣಪ್ಪ, ಪಾಂಡುರಂಗ ನಾಯಕ, ಶರಣಪ್ಪ ಕೋರಿ, ಸೀತಪ್ಪ ರಾಠೋಡ್, ದೇವೇಂದ್ರಪ್ಪ ಕೆ.ಇರಬಗೇರಾ ಇತರರಿದ್ದರು
- ತಾಪಂ ಇಒಗೆ ಗ್ರಾಪಂ ನೌಕರರ ಸಂಘ ಮನವಿ
- ದೇವದುರ್ಗ ಕನಿಷ್ಠ ವೇತನ ನೀಡುವಂತೆ ಒತ್ತಾಯ
ದೇವದುರ್ಗ: ಗ್ರಾಪಂ ನೌಕರರಿಗೆ ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಿ ತಾಪಂ ಇಒ ಕೆ.ರಾಜೇಂದ್ರಕುಮಾರಗೆ ಗ್ರಾಪಂ ನೌಕರರ ಸಂಘ (ಸಿಐಟಿಯು ಸಂಯೋಜಿತ) ಮನವಿ ಸಲ್ಲಿಸಿತು.
ತಾಲೂಕಿನ 33 ಗ್ರಾಪಂ ಸೇರಿದಂತೆ ರಾಜ್ಯದ ವಿವಿಧ ಗ್ರಾಪಂಗಳಲ್ಲಿ ನೀರುಗಂಟಿಗಳು, ಕರ ವಸೂಲಿಗಾರರು, ಸ್ವಚ್ಛತಾ ಸಿಬ್ಬಂದಿ, ಕಸವಿಲೇವಾರಿ ವಾಹನ ಚಾಲಕರು, ಡೇಟಾ ಎಂಟ್ರಿ ಆಪರೇಟರ್, ಜವಾನರು, ಲೈನ್‌ಮನ್‌ಗಳು ಅತ್ಯಂತ ಕನಿಷ್ಠ ಸೌಲಭ್ಯ ಹಾಗೂ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ನೌಕರರಿಗೆ ಆರು ತಿಂಗಳು, ವರ್ಷದ ನಂತರ ವೇತನ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು. ಪ್ರತಿ ತಿಂಗಳು ವೇತನ ನೀಡಬೇಕು. ನೌಕರರಿಗೆ ಅಗತ್ಯ ಸೌಲಭ್ಯ ನೀಡಿ, ಜೀವನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.