ಸಿಂಧನೂರಿನಲ್ಲಿ ತಹಸಿಲ್ ಕಚೇರಿಯ ಶಿರಸ್ತೇದಾರ ಅಂಬಾದಾಸ್‌ಗೆ ರಾಜ್ಯ ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಸಂಘ ಶುಕ್ರವಾರ ಮನವಿ ಸಲ್ಲಿಸಿತು. ಟಿಯುಸಿಐ ಜಿಲ್ಲಾ ಸಮಿತಿ ಸದಸ್ಯ ಎಚ್.ಆರ್. ಹೊಸಮನಿ, ಕ್ರೈಸ್ ವಸತಿ ಶಾಲೆಯ ದೇವೇಂದ್ರಪ್ಪ, ಸಂತೋಷ ಬಾಲಿ, ನಜೀರ್, ನಸ್ರಿನಾ ಬೇಗಂ, ರೇಣುಕಮ್ಮ, ಯಲ್ಲಮ್ಮ, ಚನ್ನಮ್ಮ, ಪದ್ದಮ್ಮ, ಶಾಂತಮ್ಮ ಇತರರಿದ್ದರು.
ಸಿಂಧನೂರು: ನಗರ ಹಾಗೂ ಗೋನವಾರ ಪರಿಶಿಷ್ಟ ಪಂಗಡ ವಸತಿ ನಿಲಯಗಳ ಹೊರಗುತ್ತಿಗೆ ಕಾರ್ಮಿಕರಿಗೆ 5 ತಿಂಗಳ ಬಾಕಿ ವೇತನ ಪಾವತಿಸಬೇಕೆಂದು ಒತ್ತಾಯಿಸಿ ರಾಜ್ಯ ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಸಂಘ ಶುಕ್ರವಾರ ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್‌ಗೆ ಮನವಿ ಸಲ್ಲಿಸಿತು.
ಈ ಮೊದಲು ಜಾರಿಯಲ್ಲಿದ್ದ ವೇತನದಂತೆ ಬಾಕಿ ವೇತನ ಹಾಗೂ 2026ರ ಮೇ ತಿಂಗಳಿಂದ ಜಾರಿಯಾದ ಹೊಸ ವೇತನ ಪರಿಷ್ಕರಣೆಯಂತೆ ನಂತರದ ಅವಧಿಯ ವೇತನವನ್ನು ಲೆಕ್ಕ ಹಾಕಿ ಸಂಪೂರ್ಣವಾಗಿ ಪಾವತಿಸಬೇಕು.
ವೇತನ ಪಾವತಿಯಲ್ಲಿ ವಿಳಂಬ, ಇಲಾಖೆ ಜಮಾ ಮಾಡದಿರುವ ಮತ್ತು ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸಿರುವ ಏಜೆನ್ಸಿ ವಿರುದ್ಧ ಕಾರ್ಮಿಕ ಕಾನೂನುಗಳ ಅಡಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳ ವೇತನವನ್ನು ಕಡ್ಡಾಯವಾಗಿ ಮುಂದಿನ ತಿಂಗಳ 5ನೇ ತಾರೀಖಿನೊಳಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಶಾಶ್ವತ ವ್ಯವಸ್ಥೆಯನ್ನು ಜಾರಿಗೊಳಿಸಿ, ವಿಳಂಬವಾದಲ್ಲಿ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು.
ಮುಂದಿನ ದಿನಗಳಲ್ಲಿ ಯಾವುದೇ ಕಾರ್ಮಿಕರ ವೇತನ, ಪಾವತಿಯಲ್ಲಿ ವಿಳಂಬವಾಗದಂತೆ ಇಲಾಖೆ ನೇರ ಮೇಲ್ವಿಚಾರಣೆ ವಹಿಸಬೇಕೆಂದು ಒತ್ತಾಯಿಸಿದರು.
ಟಿಯುಸಿಐ ಜಿಲ್ಲಾ ಸಮಿತಿ ಸದಸ್ಯ ಎಚ್.ಆರ್. ಹೊಸಮನಿ, ಕ್ರೈಸ್ ವಸತಿ ಶಾಲೆಯ ದೇವೇಂದ್ರಪ್ಪ, ಸಂತೋಷ ಬಾಲಿ, ನಜೀರ್, ಸಿಂಧನೂರು ಹಾಗೂ ಗೋನವಾರ ಪರಿಶಿಷ್ಟ ವರ್ಗ ವಸತಿ ನಿಲಯ ನೌಕರರಾದ ನಸ್ರಿನಾ ಬೇಗಂ, ರೇಣುಕಮ್ಮ, ಯಲ್ಲಮ್ಮ, ಚನ್ನಮ್ಮ, ಪದ್ದಮ್ಮ, ಶಾಂತಮ್ಮ, ಜೈನಮ್ಮ, ನಿಂಗಮ್ಮ, ಷಣ್ಮುಖ,ಭೀಮಮ್ಮ, ಅಕ್ಕನಾಗಮ್ಮ, ನಾಗರತ್ನಮ್ಮ, ಜಯರಾಜ ಇದ್ದರು.