ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಚುನಾವಣಾ ಆಯೋಗ ಪಂಚಾಯಿತಿ ಚುನಾವಣೆಯಲ್ಲಿ ಸಂವಿಧಾನ ಅನುಚ್ಚೇದ 40 ಪ್ರಕಾರ ಗ್ರಾಮ, ತಾಲೂಕ ಮತ್ತು ಜಿಲ್ಲಾ ಪಂಚಾಯಿತಿಗಳು ಸ್ಥಳಿಯ ಸರ್ಕಾರಗಳೆಂದು ಪರಿಗಣಿಸಲಾಗಿದೆ. ತಾಲೂಕ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ರಾಜಕೀಯ ಪಕ್ಷಗಳ ಚಿಹ್ನೆ ಬಳಸುವದರಿಂದ ರಾಜಕೀಯ ಬಲಾಬದಲ ವೇದಿಕೆಯಾಗಿ ಪಂಚಾಯಿತಿ ವಿಕೇಂದ್ರಿಕರಣ ಅರ್ಥವೇ ಕಳೆದುಕೊಳ್ಳುವಂತಾಗುತ್ತದೆ.
ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ. ಒಂದು ವಾರದಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದೇ ಇದ್ದಲ್ಲಿ ಕಲಬುರಗಿ ಉಚ್ಚನ್ಯಾಯಾಲಯದಲಿ ರಿಟ್ ಅರ್ಜಿಸಲ್ಲಿಸುವದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಹುಸೇನ ಬಾಷಾ, ನರಸಿಂಹ , ಸುಧಾಕರ ಇದ್ದರು.