ಮುದಗಲ್ ಸಮೀಪದ ಅಂಕಲಿಮಠದಲ್ಲಿ ಬನ್ನಿಗೋಳ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ ಚಾಲನೆ ನೀಡಿದರು. 
ರಾಯಚೂರು

ಕ್ರೀಡಾ ಮನೋಭಾವನೆಯಿಂದ ಪಾಲ್ಗೊಳ್ಳಿ

ಮುದಗಲ್: ಕ್ರೀಡೆಯಲ್ಲಿ ಸೋಲು-ಗೆಲುವನ್ನು ಕ್ರೀಡಾಪಟುಗಳು ಸಮನಾಗಿ ಸ್ವೀಕರಿಸಬೇಕೆಂದು ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ ಹೇಳಿದರು.
ಅಂಕಲಿಮಠದಲ್ಲಿ ಬನ್ನಿಗೋಳ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಗುರುವಾರ ಆಶೀರ್ವಚನ ನೀಡಿದರು. ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು, ಭಾರತೀಯ ಸಂಸ್ಕಾರ ತಿಳಿಸಿಕೊಡಬೇಕೆಂದು ಕಿವಿಮಾತು ಹೇಳಿದರು.
ನಿರ್ಣಾಯಕರು ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಪಾರದರ್ಶಕವಾಗಿ ವಿಜೇತರನ್ನು ಆಯ್ಕೆ ಮಾಡಬೇಕು. ವಿದ್ಯಾರ್ಥಿಗಳಿಗೆ ಕ್ರೀಡೆಗಳು ಉತ್ತಮ ಆರೋಗ್ಯಕ್ಕಾಗಿ ಸಹಕಾರಿಯಾಗಲಿದ್ದು, ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯಿಂದ ಕ್ರೀಡಾಕೂಟದಲ್ಲಿ ಭಾಗಿಯಾಗಲು ಕರೆ ನೀಡಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಶೇಖರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಸಂಗಯ್ಯ ಗಣಾಚಾರಿ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎನ್.ಅಕ್ಕಿ, ಸಿಆರ್‌ಪಿ ಶ್ರೀನಿವಾಸ ರೆಡ್ಡಿ, ಶಿಕ್ಷಕರಾದ ಮಹಾಂತೇಶ ಹಳ್ಳೂರು, ಮಹಾಂತೇಶ ಸಜ್ಜನ್, ರಿಯಾಜ್, ಪ್ರಮುಖರಾದ ರುದ್ರಗೌಡ, ಸಿದ್ರಾಮಯ್ಯ ತಾತ, ಗುಂಡನಗೌಡ, ಮಲ್ಲಿಕಾರ್ಜುನ ಗೌಡರ, ಮಹೇಶ, ರಾಜಸಾಬ್, ದಾದಾಪೀರ್ ಇತರರಿದ್ದರು.