ರಾಯಚೂರಿನ ಸದರ್ ಬಜಾರ ಠಾಣೆ ವ್ಯಾಪ್ತಿಯಲ್ಲಿ ಕಳೆದುಹೋದ 4.30 ಲಕ್ಷ ವೆಚ್ಚದ ಒಟ್ಟು 24 ಮೊಬೈಲ್‌ಗಳನ್ನು ಪತ್ತೆಹಚ್ಚಿ ಎಎಸ್ಪಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಬುಧವಾರ ಮಾಲೀಕರಿಗೆ ನೀಡಲಾಯಿತು. ಸಿಪಿಐ ಉಮೇಶ ಕಾಂಬ್ಳೆ, ಪಿಎಸ್‌ಐ ಲಕ್ಷ್ಮೀ ಇದ್ದರು. 
ರಾಯಚೂರು

ಮಾಲೀಕರಿ ಮೊಬೈಲ್ ಹಸ್ತಾಂತರ

ರಾಚಯ್ಯ ಸ್ವಾಮಿ
ರಾಯಚೂರು ನಗರದ ಸದರ್ ಬಜಾರ ಠಾಣೆ ವ್ಯಾಪ್ತಿಯಲ್ಲಿ ಕಳೆದುಹೋದ 4.30 ಲಕ್ಷ ವೆಚ್ಚದ ಒಟ್ಟು 24 ಮೊಬೈಲ್‌ಗಳನ್ನು
ಪತ್ತೆಹಚ್ಚಿ ಎಎಸ್ಪಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಬುಧವಾರ ಮಾಲೀಕರಿಗೆ ನೀಡಲಾಯಿತು.
ನಂತರ ಮಾತನಾಡಿ, ಸಿಇಐಆರ್ ಪೋರ್ಟಲ್‌ನ ಸಹಾಯದಿಂದ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ. ಈ ಕಾರ್ಯಾಚರಣೆಯ ಮೂಲಕ ಕಳೆದುಹೋದ ಮೊಬೈಲ್‌ಗಳನ್ನು ಮರುಪಡೆಯುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದ ಸಂದರ್ಭಗಳಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಪಿಐ ಉಮೇಶ ಕಾಂಬ್ಳೆ, ಪಿಎಸ್‌ಐ ಲಕ್ಷ್ಮೀ ಸೇರಿ ಅನೇಕರು ಇದ್ದರು.