ಕೃಷ್ಣ ಶಾವಂತಗೇರಾ  
ರಾಯಚೂರು

ಜು.11 ರಂದು ನಮ್ಮ ಅಭಿಮಾನ,ನಮ್ಮ ಅಭಿನಂದನಾ ಕಾರ್ಯಕ್ರಮ

ರಾಚಯ್ಯ ಸ್ವಾಮಿ
ರಾಯಚೂರು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಜು.11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಮ್ಮ ಅಭಿಮಾನ, ನಮ್ಮ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆಂದು ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸರಿ ಸುಮಾರು 25 ಸಾವಿರ ಸರ್ಕಾರಿ ನೌಕರರು ಭಾಗವಹಿಸುವ ನಿರೀಕ್ಷೆಯಿದೆ. ಅಭಿನಂದನಾ ಸಮಾರಂಭದಲ್ಲಿ ಹಕ್ಕೋತ್ತಾಯದ ಮನವಿಯನ್ನು ಸಹ ಸಲ್ಲಿಸಲಾಗುತ್ತದೆ. ಎನ್‌ಪಿಎಸ್ ರದ್ದುಗೊಲಿಸಿ ಓಪಿಎಸ್ ಪ್ರಾರಂಭಿಸುವದು, ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಿ ನೌಕರರ ವೇತನದಂತೆ ರಾಜ್ಯ ಸರ್ಕಾರಿ ನೌಕರರು ವೇತನ ಅನ್ವಯಿಸುವಂತೆ ಆಗ್ರಹಿಸಲಾಗುತ್ತದೆ ಎಂದರು.
ಜತೆಗೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ ಹಾಗೂ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ ಇವರನ್ನು ಸನ್ಮಾನಿಸಿ ಅಭಿನಂದಿಸಲಾಗುತ್ತದೆ.ಜಿಲ್ಲೆಯಿಂದ 1500 ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಲು ಉದ್ದೇಶಿಸಲಾಗಿದೆ.
ರಾಜ್ಯದಲ್ಲಿ ಪ್ರಾರಂಭವಾಗಿರುವ ಎಸ್‌ಐಆರ್ ಪ್ರಕ್ರಿಯೆ ಸರ್ಕಾರಿ ನೌಕರರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದು ಹೆಚ್ಚಿನ ಒತ್ತಡ ಹೇರದಂತೆ ಮನವಿ ಮಾಡಲಾಗಿದೆ. ಕೆಲವಡೆ ಒತ್ತಡಕ್ಕೆ ನೌಕರರು ಸಾವಿಗೀಡಾಗಿರುವದು ದುರದುಷ್ಟಕರ. ಇಂತಹ ಘಟನೆಗಳು ನಡೆಯದಂತೆ ನಿಗಧಿತ ಸಮಯದಲ್ಲಿ ಎಸ್‌ಐಆರ್ ನಡೆಸಲು ಅವಕಾಶ ನೀಡಬೇಕು ಒತ್ತಡ ಹಾಕದಂತೆ ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಶಂಕರಗೌಡ ಪಾಟೀಲ್, ಶ್ರೀನಿವಾಸ, ವೆಂಕಪ್ಪ ಫಿರಂಗಿ ಇದ್ದರು.