ಸಿಂಧನೂರಿನ ಹೆಲಿಪ್ಯಾಡ್ ಬಳಿ ಸಿಎಂ ಸಿದ್ದರಾಮಯ್ಯಗೆ ರೈತ ಸಂಘದ ತಾಲೂಕು ಘಟಕ ಮನವಿ ಸಲ್ಲಿಸಿತು. ಸಂಘದ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಬಿ.ಎನ್.ಯರದಿಹಾಳ, ಮೇಘರಾಜ ನಾಯಕ ಇದ್ದರು. 
ರಾಯಚೂರು

ಕಟಾವು ಮುನ್ನ ಖರೀದಿ ಕೇಂದ್ರ ತೆರೆಯಿರಿ

ನರೇಶ್ ಕುಮಾರ್
ಸಿಂಧನೂರು: ವಿವಿಧ ಬೆಳೆ ಕಟಾವಿಗೂ ಒಂದು ತಿಂಗಳು ಮೊದಲು ಖರೀದಿ ಕೇಂದ್ರ ತೆರೆಯಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಸಂಘದ ತಾಲೂಕು ಘಟಕ ಶನಿವಾರ ಅಂಬಾಮಠದ ಜಾತ್ರೋತ್ಸವಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿತು.
ಸರ್ಕಾರ ಪ್ರತಿ ಕ್ವಿಂಟಾಲ್ ಕೃಷಿ ಉತ್ಪನ್ನಗಳಿಗೆ 800 ರಿಂದ 1500 ರೂ. ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಆಂಧ್ರ, ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ 50 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸುವ ತೀರ್ಮಾನ ಕೈಗೊಳ್ಳಬೇಕು. ಪ್ರತಿ ರೈತರಿಂದ 300 ಕ್ವಿಂ. ಭತ್ತ, 200 ಕ್ವಿಂ. ಜೋಳ, 30 ಕ್ವಿಂ. ತೊಗರಿ, 100 ಕ್ವಿಂ. ಸಜ್ಜೆ, 25 ಕ್ವಿಂ. ಕಡಲೆ, 100 ಚೀಲ ಮೆಕ್ಕೆಜೋಳ ಖರೀದಿಸಲು ತೀರ್ಮಾನ ಮಾಡಬೇಕು. 
ಸರ್ಕಾರ ಅನಗತ್ಯ ನಿಯಮಾವಳಿಗಳನ್ನು ವಿಧಿಸಿ ನುಣುಚಿಕೊಳ್ಳುವ ಕಾರ್ಯ ಮಾಡಬಾರದು. ಜಿಲ್ಲೆಯ 7 ತಾಲೂಕುಗಳಲ್ಲಿ ಬೆಳೆ ಹಾನಿ ಪರಿಶೀಲನೆ ಮಾಡುವ ಅಧಿಕಾರಿಗಳು ರೈತರಿಗೆ ವಂಚಿಸಿ ಖಾಸಗಿ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದು, ಮೇಲುಸ್ತುವಾರಿ ಸಮಿತಿ ರಚಿಸಬೇಕು. ತೊಗರಿ ಬೆಳೆಗೆ ಪ್ರೋತ್ಸಾಹ ಧನ ನೀಡಬೇಕೆಂದು ಆಗ್ರಹಿಸಿದರು.