ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ರಾಯಚೂರು
ಸಿಇಟಿ ಪರೀಕ್ಷೆ ಹಾಜರಾದ ವಿದ್ಯಾರ್ಥಿಗಳಿಗೆ ಜನಿವಾರ ಕಳಚಿದ ಸಿಬ್ಬಂದಿ ಹಾಗೂ ಸರ್ಕಾರಕ್ಕೆ ಕಾಲವೇ ಉತ್ತರ ನೀಡಲಿದೆಂದು ಉಡುಪಿಯ ಶ್ರೀಕೃಷ್ಣ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ವೇದವ್ಯಾಸ ಜಯಂತಿ, ನಾಳೆ ನರಸಿಂಹ ಸ್ವಾಮಿಗಳ ಜಯಂತಿ ಇದೆ. ಅದರಿಂದ ನಾನು ಯಾವುದೇ ವಿಷಯದ ಕುರಿತು ಮಾತನಾಡುವುದಿಲ್ಲ. ನಮ್ಮ ಆಧ್ಯಾತ್ಮಿಕ ಲೋಕದ ಪರಿಚಯ ಮಾಡಿಕೊಡುವಂತಹ ಸಾಧನೆ ಪ್ರಯಾಣಗಳಿರಬಹುದು. ಎಲ್ಲಾ ವೇದಗಳು, ನಾಲ್ಕು ವೇದಗಳಿರಬಹುದು, ಅವನ್ನೆಲ್ಲಾ ಸಮಾಜಕ್ಕೆ ಕೊಟ್ಟಿರತಕ್ಕಂತ ವ್ಯಕ್ತಿ ವೇದವ್ಯಾಸ ದೇವರು. ನಾವು ಅವರನ್ನು ಭಗವಂತನ ಅವತಾರವೆಂದು ಹೇಳುತ್ತೇವೆ. ಶ್ರೀಮನ್ನಾರಾಯಣನ ಅವತಾರವೆಂದು ಕರಿಯುತ್ತವೆ. ಅಂತಹ ವೇದವ್ಯಾಸ ದೇವರು ಅವತಾರ ತಾಳಿದಂತಹ ದಿನ ಇದಾಗಿದ್ದು, ಮಾ.29 ರಂದು ನರಸಿಂಹ ಜಯಂತಿ.
ಭಗವಂತ ಭಕ್ತ ಪ್ರಹ್ಲಾದನಿಗೋಸ್ಕರ ಕಂಬದಿಂದಲೂ ಹೊರಹೊಮ್ಮಿ ಬಂದಿದ್ದಾನೆ. ತನ್ನ ಇರುವನ್ನು ಎಲ್ಲ ಕಡೆ ಇದೆ ಅನ್ನೋದನ್ನು ಆ ಮೂಲಕ ತೋರಿಸಿಕೊಟ್ಟಿದ್ದಾನೆ. ಅಂತಹ ನರಸಿಂಹ ದೇವರು ಅವರ ಅನುಗ್ರಹ, ದುಷ್ಟ ಶಕ್ತಿಗಳೆಲ್ಲಾ ದೂರಾಗಬೇಕು. ನರಸಿಂಹ ದೇವರು ಅನುಗ್ರಹ ಮಾಡಲಿ ಅಂತ ಪ್ರಾರ್ಥನೆ ಮಾಡ್ತಾ ಇದ್ದೇವೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಶೀಘ್ರದಲ್ಲಿ ಕಾಲವೇ ಉತ್ತರ ನೀಡಲಿದೆ ಅಲ್ಲಿಯ ವರೆಗೆ ನಾನು ಏನು ಮಾತನಾಡುವುದಿಲ್ಲವೆಂದು ತಿಳಿಸಿದರು.