ರಾಯಚೂರಿನ ಮಹಾನಗರ ಪಾಲಿಕೆಯ ಕಚೇರಿಗೆ ಈಚೇಗೆ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಭೇಟಿ ನೀಡಿದರು.
- ಮೈಸೂರು ಪಾಲಿಕೆಯ 20 ಜನ ಜಿಲ್ಲೆಗೆ ಭೇಟಿ
- ಸ್ವಚ್ಚತೆಗೆ ನಿರಂತರ ಜಾಗೃತಿ
- ಜಿಲ್ಲೆಗೆ ಮೈಸೂರು ಪಾಲಿಕೆ ಸಾಥ್
ರಾಯಚೂರು ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ರಾಯಚೂರು 815 ನೇ ಪಡೆದು ಭಾರೀ ಹಿಂದುಳಿಯುತ್ತಿದೆ. ಇದೀಗ ಸ್ವಚ್ಛ ಸರ್ವೇಕ್ಷಣ ರ‌್ಯಾಂಕಿಂಗ್ ಸುಧಾರಿಸಿಕೊಳ್ಳಲು ಮಹಾನಗರ ಪಾಲಿಕೆ ಅಧಿಕಾರಿಗಳು ನಗರ ಸಚ್ಚತೆಗೆ ಮೊದಲ ಆದ್ಯತೆ ನೀಡಲು ಮುಂದಾಗಿದ್ದಾರೆ.
ಕಳೆದ 6 ತಿಂಗಳಿಂದ ನಗರವನ್ನು ಸ್ವಚ್ಚ ಹಾಗೂ ಸುಂದರವಾಗಿಸಬೇಕು. ಸ್ವಚ್ಛ ಸರ್ವೇಕ್ಷಣ ಉತ್ತಮ ರ‌್ಯಾಂಕಿಂಗ್ ಪಡೆಯಬೇಕು ಎನ್ನುವ ಗುರಿಯೊಂದಿಗೆ ಒಂದಷ್ಟು ಕ್ರಮಕ್ಕೆ ಮುಂದಾಗಲಾಗಿದೆ. ಮನೆಗಳಲ್ಲೇ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಘನತ್ಯಾಜ್ಯ ಇಲಾಖೆಯ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಖಡಕ್ ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಮತ್ತು ಉಗುಳುವಿಕೆ ಪ್ರಕರಣಗಳು ಸ್ಕೈ-ವಾಕ್‌ಗಳ ಬಳಿ ಹೆಚ್ಚಾಗಿ ಕಂಡುಬರುತ್ತಿದ್ದು, ಇದು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ. ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಭಾಗವಾಗಿ ನಗರದ 36 ವಾರ್ಡ್‌ಗಳಲ್ಲಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಜತೆಗೆ ವಾಟರ್ ಜೆಟಿಂಗ್ ಯಂತ್ರಗಳ ಮೂಲಕ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿವುದು, ಪಾದಚಾರಿ ಮಾರ್ಗಗಳಲ್ಲಿರುವ ಸಸಿಗಳು ಮತ್ತು ಮರಗಳ ಸುತ್ತ ಗ್ರಾಸ್ ಪೇವರ್ ಅಳವಡಿಸಲಾಗಿದ್ದು, ನಗರದ ಸ್ವಚ್ಛತೆಗಾಗಿ ಕಾರ್ಯನಿರ್ವಹಿಸುವ ಎಲ್ಲಾ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸುವ ಜೊತೆಗೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಒದಗಿಸಲಾಗಿದ್ದು, ಜತೆಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ನಾಗರಿಕರಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನದ ಕುರಿತು ಅರಿವು ಮೂಡಿಸುವ ಕೆಲಸ ಪಾಲಿಕೆ ಅಧಿಕಾರಿಗಳು ಮಾಡುತ್ತಿದ್ದಾರೆ.
ಮಾರುಕಟ್ಟೆ ಸ್ವಚ್ಛತೆ
ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ಸಂಬಂಧಿಸಿದಂತೆ ನಗರದಲ್ಲಿನ ಬೃಹತ್ ಹೋಟೆಲ್‌ಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ಗಳು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಪಾಲಿಕೆ ಅಧಿಕಾರಿಗಳು ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸುವಂತೆ ಸೂಚಿಸಸಲಾಗಿದೆ. ಜೊತೆಗೆ ಮಾರುಕಟ್ಟೆ ಪ್ರದೇಶಗಳಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಾಚರಣೆ ನಡೆಸಲು ನಿರ್ದೇಶನ ನೀಡಿದರು. ನಗರದಲ್ಲಿ ಕಸ ಸಂಗ್ರಹ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರಲಾಗಿದ್ದು, ಎಲ್ಲಿಯೂ ಕಸ ಸುರಿಯುವ ಸ್ಥಳಗಳು ಇರದಂತೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಮನೆ-ಮನೆಗೆ ಕಸ ಸಂಗ್ರಹಣಾ ವ್ಯವಸ್ಥೆ ಸಮರ್ಪಕವಾಗಿ ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ದಂಡ ವಿಧಿಸಸಲು ಪಾಲಿಕೆ ಮುಂದಾಗಿದೆ.
ಜಿಲ್ಲೆಗೆ ಮೈಸೂರು ಪಾಲಿಕೆ ಸಾಥ್
ಸ್ವಚ್ಛ ಸರ್ವೇಕ್ಷಣಾಯೋಜನೆಯಡಿ ರಾಯಚೂರು ನಗರವನ್ನು ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸತತ ಪರಿವರ್ತನೆ ಮತ್ತು ಕಾರ್ಯಕ್ಷಮತೆಯ ಮೂಲಕ ನಗರವನ್ನು ಸಕಾರಾತ್ಮಕ ಬದಲಾವಣೆ ಮತ್ತು ಸ್ಥಿತಿಸ್ಥಾಪಕ ಆಡಳಿತವನ್ನು ಮುನ್ನೆಲೆಗೆ ತರಲು ಸ್ವಚ್ಛತಾ ಶ್ರೇಯಾಂಕದಲ್ಲಿ ಮುಂಚೂಣಿಯಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ಸಾಥ್ ನೀಡಿದ್ದು,
2025 ಡಿಸೆಂಬರ್ 20 ರಂದು ರಾಯಚೂರು ಮಹಾನಗರ ಪಾಲಿಕೆಯಿಂದ 20 ಜನರ ತಂಡ ಮೈಸೂರು ನಗರಕ್ಕೆ ತೆರಳಿ ಅಲ್ಲಿನ ಪರಿಸರ ಹಾಗೂ ಸ್ವಚ್ಚತೆಗೆ ನೀಡುವ ಆದ್ಯತೆಯನ್ನು ಪರಿಗಣಿಸಿ ಬಂದ ನಂತರ ಮಾ.24 ರಂದು ಮೈಸೂರು ಮಹಾನಗರ ಪಾಲಿಕೆಯ 20 ಜನರ ಅಧಿಕಾರಿಗಳ ತಂಡವು ರಾಯಚೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿ, ನಗರದ ಸ್ವಚ್ಛತೆಗೆ ಕೈಜೋಡಿಸಿ ಹೆಚ್ಚಿನ ಉಪಕ್ರಮಗಳನ್ನು ಮತ್ತು ಸ್ವಚ್ಛತೆಯಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು ತರುವ ನಿಟ್ಟಿನಲ್ಲಿ ಸಭೆ ಕೆರೆದು ನಗರದ ಅನೇಕ ಬಡಾವಣೆಗಳಿಗೆ ಭೇಟಿ ಸ್ವಚ್ಚತೆಯ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದೆ.