ಬುಂಕಲದೊಡ್ಡಿ ಗ್ರಾಮದಲ್ಲಿ ಖಾತ್ರಿ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಕೆ.ರಾಜೇಂದ್ರ ಭೇಟಿ ನೀಡಿ ಕೂಲಿಕಾರರ ಜತೆ ಮಾತುಕತೆ ನಡೆಸಿದರು. ತಾಂತ್ರಿಕ ಸಂಯೋಜಕ ಮೆಹಬೂಬ್, ತಾಂತ್ರಿಕ ಸಹಾಯಕ ಮಂಜುನಾಥ, ಬಿಎಫ್‌ಟಿ ಮಂಜುನಾಥ ಇತರರಿದ್ದರು. 
ರಾಯಚೂರು

ಉದ್ಯೋಗ ಖಾತ್ರಿ, ಎರಡು ಬಾರಿ ಹಾಜರಾತಿ ಕಡ್ಡಾಯ

ನರೇಶ್ ಕುಮಾರ್
ದೇವದುರ್ಗ: ಗ್ರಾಮೀಣ ಭಾಗದ ಜನರು ಕೆಲಸ ಹರಸಿ ಗುಳೆ ಹೋಗದಂತೆ ತಡೆಯಲು ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲಾಗಿದೆ. ಕೆಲಸದಲ್ಲಿ ಗಂಡು ಹೆಣ್ಣು ಎಂಬ ಬೇಧವಿಲ್ಲದೆ 370 ರೂ. ಸಮಾನ ಕೂಲಿ ನೀಡಲಾಗುವುದು ಎಂದು ತಾಪಂ ಇಒ ಕೆ.ರಾಜೇಂದ್ರ ಹೇಳಿದರು.
ತಾಲೂಕಿನ ಬುಂಕಲದೊಡ್ಡಿ ಗ್ರಾಮದಲ್ಲಿ ಮಂಗಳವಾರ ಖಾತ್ರಿ ಯೋಜನೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ಪೂರ್ಣಪ್ರಮಾಣದ ಕೂಲಿ ದೊರೆಯಲಿದೆ. ಬೇಸಿಗೆ ಆಗಿರುವುದರಿಂದ ಬೆಳಗ್ಗೆ ಬೇಗಬಂದು ನಿರ್ದಿಷ್ಟ ಕೆಲಸ ಮಾಡಿದರೆ ಬೇಗ ಹೋಗಬಹುದು. 
ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಎರಡು ಬಾರಿ ಹಾಜರಾತಿ ಕಡ್ಡಾಯ ಮಾಡಲಾಗಿದೆ. ಸಾಮಾಜಿಕ ಭದ್ರತೆ ಕಲ್ಪಿಸಲು 65 ವರ್ಷ ಮೇಲ್ಪಟ್ಟವರು, ಅಂಗವಿಕಲರು, ಗರ್ಭಿಣಿಯರಿಗೆ ಶೇ.50 ಕೆಲಸ ರಿಯಾಯಿತಿಯಿದೆ. ಅರ್ಧಕೆಲಸ ಮಾಡಿದರೆ ಪೂರ್ತಿ ಪ್ರಮಾಣದ ಕೂಲಿ ದೊರೆಯಲಿದೆ ಎಂದು ಹೇಳಿದರು. ತಾಂತ್ರಿಕ ಸಂಯೋಜಕ ಮೆಹಬೂಬ್, ತಾಂತ್ರಿಕ ಸಹಾಯಕ ಮಂಜುನಾಥ, ಬಿಎಫ್‌ಟಿ ಮಂಜುನಾಥ, ಆಂಜನೇಯ, ಬಸವರಾಜ, ಶಿವು ಇತರರಿದ್ದರು.