ಸಿಂಧನೂರು ತಾಲೂಕಿನ ಕೆಂಗಲ್ ಗ್ರಾಮದಲ್ಲಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಪ್ರತಿಭಟನೆ ನಡೆಸಿತು. ಸಂಘದ ತಾಲೂಕಾಧ್ಯಕ್ಷ ಅಪ್ಪಣ್ಣ ಕಾಂಬಳೆ, ಕಾರ್ಮಿಕ ಮುಖಂಡರಾದ ಯಂಕಪ್ಪ ಕೆಂಗಲ್, ರಾಮಣ್ಣ ಹಟ್ಟಿ, ಮೌಲಪ್ಪ, ಮಲ್ಲಯ್ಯ ತಳವಾರ, ವೀರೇಶ , ಪ್ರಹ್ಲಾದ್ ಭೋವಿ ಇತರರಿದ್ದರು.
- ಕೆಂಗಲ್
- ಕಾರ್ಮಿಕರ ಸಂಘ
- ಪ್ರತಿಭಟನೆ
ವಿಜಯವಾಣಿ ಸುದ್ದಿಜಾಲ ಸಿಂಧನೂರು
ಮಹಾತ ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ವಿಬಿ ಜಿ ರಾಮ್ ಜಿ ಎಂಬುದಾಗಿ ಬದಲಾವಣೆ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ತಾಲೂಕಿನ ಕೆಂಗಲ್ ಗ್ರಾಮದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಕೇಂದ್ರ ಸರ್ಕಾರ ಮನರೇಗಾ ಹೆಸರು ಬದಲಾವಣೆ ಮಾಡುವ ಮೂಲಕ ರಾಜಕೀಯ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ಬಡವರಿಗೆ ಅನುಕೂಲವಾಗಿದ್ದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಹೆಸರು ಬದಲಾವಣೆ ಮಾಡಲು ಹೊರಟಿದೆ. ಬಿಜೆಪಿ ಮೊದಲಿನಿಂದಲೂ ಮಹಾತ್ಮಗಾಂಧಿ ಅವರನ್ನು ವಿರೋಧಿಸುತ್ತಾ ಬಂದಿದೆ. ಯೋಜನೆಗೆ ಗಾಂಧಿ ಅವರ ಹೆಸರು ಇಟ್ಟಿರುವುದನ್ನು ಸಹಿಸಿಕೊಳ್ಳುತ್ತಿಲ್ಲ. ಆರ್‌ಎಸ್‌ಎಸ್ ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಆದ್ದರಿಂದ ತಕ್ಷಣ ನರೇಗಾ ಯೋಜನೆ ಹೆಸರು ಬದಲಾವಣೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕಾಧ್ಯಕ್ಷ ಅಪ್ಪಣ್ಣ ಕಾಂಬಳೆ, ಕಾರ್ಮಿಕ ಮುಖಂಡರಾದ ಯಂಕಪ್ಪ ಕೆಂಗಲ್, ರಾಮಣ್ಣ ಹಟ್ಟಿ, ಮೌಲಪ್ಪ, ಮಲ್ಲಯ್ಯ ತಳವಾರ, ವೀರೇಶ , ಪ್ರಹ್ಲಾದ್ ಭೋವಿ, ಬಸವರಾಜ, ತಾನೇಶ ಮಾದರ, ಬಸವರಾಜ ಮತ್ರಿ, ಸಿದ್ದಪ್ಪ, ಮಾರೆಪ್ಪ ಹಟ್ಟಿ, ಹನುಮೇಶ, ಭೀಮೇಶ ದಯಾಳಿ, ಬಸವರಾಜ, ಶಾರದಮ್ಮ, ಅಂಬಮ್ಮ, ಮಂಜಮ್ಮ, ಗಂಗಮ್ಮ, ದುರ್ಗಮ್ಮ, ಲಕ್ಷ್ಮೀ, ರೇಣುಕಮ್ಮ ಇತರರಿದ್ದರು.