ಮುದಗಲ್ ಸಮೀಪದ ಮಾಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಎನ್‌ಕ್ಯೂಎಎಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಡಾ.ಲಕ್ಷ್ಮೀಕಾಂತ, ಆರೋಗ್ಯ ಇಲಾಖೆ ಸಿಬ್ಬಂದಿ ದೀಪಾ, ಮಹೇಶ್ವರಿ, ಲಿಂಗರಾಜ ವಿಶ್ವಕರ್ಮ ಇತರರಿದ್ದರು. 
ರಾಯಚೂರು

ಮಾಕಾಪುರ ಪಿಎಚ್‌ಸಿಗೆ ಎನ್‌ಕ್ಯೂಎಎಸ್ ತಂಡ ಭೇಟಿ

ನರೇಶ್ ಕುಮಾರ್
ಮುದಗಲ್: ಮಾಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡ (ಎನ್‌ಕ್ಯೂಎಎಸ್) ಮೌಲ್ಯಮಾಪನ ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.
ಡಾ.ದೌಲಸಾಬ್ ನೇತೃತ್ವದ ತಂಡವು ಆಸ್ಪತ್ರೆಯ ಹೊರರೋಗಿ ವಿಭಾಗ, ಒಳರೋಗಿ ವಿಭಾಗ, ಔಷಧ ವಿತರಣೆ, ಪ್ರಯೋಗಾಲಯ, ಹೆರಿಗೆ ಕೊಠಡಿ, ಸ್ವಚ್ಛತೆ, ವೈದ್ಯಕೀಯ ದಾಖಲೆಗಳ ನಿರ್ವಹಣೆ, ಸೋಂಕು ನಿಯಂತ್ರಣ ಕ್ರಮಗಳು ಹಾಗೂ ಒದಗಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿತು. 
ರೋಗಿಗಳಿಗೆ ಆರೋಗ್ಯ ಕೇಂದ್ರದಲ್ಲಿ ನೀಡುತ್ತಿರುವ ಸೇವೆಗಳ ಬಗ್ಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದು ಆರೋಗ್ಯ ಸೇವೆಯ ಗುಣಮಟ್ಟ ಇನ್ನಷ್ಟು ಉತ್ತಮಗೊಳಿಸಲು ಸೂಚನೆ ನೀಡಿತು. 
ಈ ಸಂದರ್ಭದಲ್ಲಿ ಡಾ.ಲಕ್ಷ್ಮೀಕಾಂತ, ಆರೋಗ್ಯ ಇಲಾಖೆ ಸಿಬ್ಬಂದಿ ದೀಪಾ, ಮಹೇಶ್ವರಿ, ಲಿಂಗರಾಜ ವಿಶ್ವಕರ್ಮ, ಸಮುದಾಯ ಆರೋಗ್ಯ ಅಧಿಕಾರಿ ಲೋಕೇಶ ದೇಸಾಯಿ ಭೋಗಾಪುರ, ರವಿರಾಜ ನಾಗಲಾಪುರ ಇತರರಿದ್ದರು.