ಮಾನ್ವಿಯ ಸಿಐಟಿಯು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನ ಕಾರ್ಯಕ್ರಮದಲ್ಲಿ ಸಿಐಟಿಯು ಅಧ್ಯಕ್ಷ ಎಚ್.ಶರ್ಫುದ್ದೀನ್ ಪೋತ್ನಾಳ ಮಾತನಾಡಿದರು. ಕಾರ್ಯದರ್ಶಿ ಸಿದ್ದಲಿಂಗಯ್ಯ, ರುದ್ರಪ್ಪನಾಯಕ, ಆಂಜನೇಯ ಇತರರಿದ್ದರು.
- ಸಿಐಟಿಯು ತಾಲೂಕಾಧ್ಯಕ್ಷ ಎಚ್. ಶರ್ಫುದ್ದೀನ್ ಪೋತ್ನಾಳ ಹೇಳಿಕೆ
- ಮಾನ್ವಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ
ಮಾನ್ವಿ: ದೇಶದ ಪ್ರಗತಿಗೆ ಕಾರ್ಮಿಕರ ಕೊಡುಗೆ ಅಪಾರ. ಅವರ ಪರಿಶ್ರಮದಿಂದ ಎಲ್ಲರೂ ಸುಖವಾಗಿರಲು ಸಾಧ್ಯವಾಗಿದೆ ಎಂದು ಸಿಐಟಿಯು ತಾಲೂಕಾಧ್ಯಕ್ಷ ಎಚ್. ಶರ್ಫುದ್ದೀನ್ ಪೋತ್ನಾಳ ಹೇಳಿದರು.
ಪಟ್ಟಣದ ಸಿಐಟಿಯು ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಟ್ಟಡ ಕೆಲಸದಿಂದ ಹಿಡಿದು ದೊಡ್ಡ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾರೆ. ಆದರೆ, ಅವರ ಪರಿಶ್ರಮಕ್ಕೆ ತಕ್ಕಂತೆ ಇಂದು ಕೂಲಿ ಸಿಗುತ್ತಿಲ್ಲ ಎಂದರು.
ಸಿಐಟಿಯು ಸಂಘಟನೆ ನಿರಂತರವಾಗಿ ಹೋರಾಟ ನಡೆಸುತ್ತ, ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕಾರ್ಮಿಕರ ಹಕ್ಕುಗಳಿಗಾಗಿ ನಡೆದ ಹೋರಾಟದಲ್ಲಿ ಅನೇಕರು ಬಲಿಯಾಗಿದನ್ನು ನಾವು ಮರೆಯುವಂತಿಲ್ಲ. ಅಮೆರಿಕದ ಚಿಕಾಗೋದಲ್ಲಿ ಕಾರ್ಮಿಕರ ಹೋರಾಟದ ವೇಳೆ ನೂರಾರು ಜನ ಬಲಿದಾನ ನಡೆದ ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನವಾಗಿ ಆಚರಿಸಲಾಗುತ್ತಿದೆ ಎಂದರು. ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರುದ್ರಪ್ಪ ನಾಯಕ, ಕಾರ್ಯದರ್ಶಿ ಸಿದ್ದಲಿಂಗಯ್ಯ, ಆಂಜನೇಯ ಕೋಟೆ, ಆಂಜನೇಯ, ಅಜ್ಜು ಮೇಷ್ತ್ರಿ, ರಮೇಶ ಚೀಕಲಪರ್ವಿ, ಸಣ್ಣ ರಾಮಣ್ಣ, ಎಂಡಿ ಇಮಾಮ್‌ಸಾಬ್, ಮಸ್ತಾನ್ ಇತರರಿದ್ದರು.