ಡಾ.ಅಜಯ್ ಧರ್ಮಸಿಂಗ್ 
ರಾಯಚೂರು

ಆರ್‌ಎಸ್‌ಎಸ್‌ಗೆ ಯಾವುದೇ ಕಾನೂನು ಮಾಡಿಲ್ಲ

ರಾಚಯ್ಯ ಸ್ವಾಮಿ

ಆರ್‌ಎಸ್‌ಎಸ್‌ಗಾಗೆಂದು ನಮ್ಮ ಸರ್ಕಾರ ಯಾವುದೇ ಹೊಸ ಕಾನೂನು ಜಾರಿ ಮಾಡಿಲ್ಲ. ಯಾವುದೇ ಸಂಘ ಸಂಸ್ಥೆಗಳು ಸಾರ್ವಜನಿಕವಾಗಿ ಕಾರ್ಯಕ್ರಮ ಮಾಡಬೇಕಾದರೆ ಪರವಾನಿಗೆ ಪಡೆಯಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೇವಾದಳ ಸೇರಿ ಎಲ್ಲಾ ಖಾಸಗಿ ಎನ್‌ಜಿಓಗಳು ಒಂದೇಯಾಗಿದ್ದು, ನಾನು ಈ ಸಂಘ,ಆ ಸಂಘವೆಂದು ಹೇಳುತ್ತಿಲ್ಲ. ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಡುವ ಕಾರ್ಯಕ್ರಮಗಳಿಗೆ ಪರವಾನಿಗೆ ಪಡಿಯಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಮಾಡಿರುವ ಕೆಲಸಗಳು ಬಿಜೆಪಿಗೆ ಸಹಿಸಿಕೊಳ್ಳಲು ಅಗುತ್ತಿಲ್ಲ. ಮಾಡಲು ಯಾವುದೇ ಕೆಲಸವಿಲ್ಲದೆ ನಮ್ಮ ಪಕ್ಷದ ಸಚಿವ ಬಿ.ನಾಗೇಂದ್ರ ರಾಜಿನಾಮೆ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್ ಹಿರಿಯ ರಾಜಕಾರಣಿ, ಹಿಂದೆ ಅವರು ಬಳ್ಳಾರಿ, ವಿಜಯನಗರ ಜವಾಬ್ದಾರಿ ತೆಗೆದುಕೊಂಡಿದ್ದರು.ಈಗ ಅವರ ಆರೋಗ್ಯ ಸರಿಯಿಲ್ಲ,
ಜಿಬಿಎ ಚುನಾವಣೆ ಇರುವ ಹಿನ್ನಲೆಯಲ್ಲಿ ಹೇಳಿರಬಹುದು. ಈಗಾಗಲೇ ಅವರು ತಮ್ಮ ಕ್ಷೇತ್ರದಲ್ಲಿ ಧ್ವಜಾರೋಹಣ ಮಾಡಿರುತ್ತಾರೆ. ವಿಜಯನಗರ ಬಹಳ ದೂರವಾಗುತ್ತದೆ. ಅವರ ಆರೋಗ್ಯ ಸರಿಯಿಲ್ಲದ ಕಾರಣ ಬೇಡ ಎಂದಿರಬಹುದು ಎಂದರು.