ನೀರಮಾನ್ವಿ ಗ್ರಾಮದಲ್ಲಿ ಶುಕ್ರವಾರ ನೇತಾಜಿ ಸುಭಾಶ್ಚಂದ್ರ ಬೋಸ್ ಜಯಂತಿ ಆಚರಿಸಲಾಯಿತು. ರೈತ ನಾಗನಗೌಡ ಪೊಪಾ, ನಿವೃತ್ತ ಯೋಧ ಆಂಜನೇಯ್ಯ ನಾಯಕ, ಗಂಟೆಯ್ಯ ದೊರೆ, ರಂಗನಾಥ ದೊರೆ, ಪಡಯ್ಯ ಸ್ವಾಮಿ, ಯಲ್ಲಯ್ಯ ದೊರೆ ಇತರರಿದ್ದರು. 
ರಾಯಚೂರು

ನೇತಾಜಿ ಪರಾಕ್ರಮ, ತ್ಯಾಗ ಸರ್ವರಿಗೂ ಪ್ರೇರಣೆ

ಮಾನ್ವಿ: ಭಾರತವನ್ನು ಬ್ರಿಟಿಷರಿಂದ ಮುಕ್ತಿಗೊಳಿಸಲು ಸ್ವಾತಂತ್ರೃ ಸೇನೆ ಕಟ್ಟಿದ ರಾಷ್ಟ್ರ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರ ಸೇನಾನಿ ನೇತಾಜಿ ಸುಭಾಶ್ಚಂದ್ರ ಬೋಸ್ ಯುವಕರಿಗೆ ಆದರ್ಶವಾಗಿದ್ದಾರೆ ಎಂದು ರೈತ ನಾಗನಗೌಡ ಪೊಪಾ ನೀರಮಾನ್ವಿ ಹೇಳಿದರು. 
ನೀರಮಾನ್ವಿ ಗ್ರಾಮದ ಗ್ರಂಥಾಲಯದಲ್ಲಿ ಶುಕ್ರವಾರ ನೇತಾಜಿ ಸುಭಾಶ್ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ನೇತಾಜಿ ತೋರಿದ ಪರಾಕ್ರಮ, ತ್ಯಾಗ ಸ್ಮರಣೀಯ. ಅಂತಹ ವೀರ ಸೇನಾನಿ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಉನ್ನತ ಸ್ಥಾನ ಅಲಂಕರಿಸಬೇಕು ಎಂದರು. 
ನಿವೃತ್ತ ಯೋಧ ಆಂಜನೇಯ್ಯ ನಾಯಕ, ಪ್ರಮುಖರಾದ ಯಲ್ಲಯ್ಯ ದೊರೆ, ಜೆ. ವೀರೇಶ, ಗ್ರಂಥಪಾಲಕ ರಂಗನಾಥಗೌಡ ಇತರರಿದ್ದರು.