ಮಸ್ಕಿಯಲ್ಲಿ ನೀಲಕಂಠೇಶ್ವರ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ಪ್ರಮುಖರಾದ ಈಶಪ್ಪ ಗಂಗಾವತಿ, ಅಮರೇಶ ಜೋತಾನ, ವಿರೂಪಾಕ್ಷಪ್ಪ ಪರಕಾಳಿ, ಬಸವರಾಜಪ್ಪ ಕಲ್ಲೂರು, ಡಾ.ಪಂಪಣ್ಣ ಮಾನ್ವಿ, ಶಿವರಾಜ ಕೆಂಭಾವಿ, ವೀರೇಶ ಜಾಲಿಹಾಳ ಇತರರಿದ್ದರು. 
ರಾಯಚೂರು

ನೀಲಕಂಠೇಶ್ವರ ದೇವರ ಪಲ್ಲಕ್ಕಿ ಉತ್ಸವ ಅದ್ದೂರಿ

ಮಸ್ಕಿ: ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದ 52ನೇ ವಾರ್ಷಿಕೋತ್ಸವ ನಿಮಿತ್ತ ಪ್ರಮುಖ ಬೀದಿಗಳಲ್ಲಿ ದೇವರ ಪಲ್ಲಕ್ಕಿ ಉತ್ಸವ ಹಾಗೂ ಭಾವಚಿತ್ರದ ಮೆರವಣಿಗೆ ಶುಕ್ರವಾರ ಅದ್ದೂರಿಯಾಗಿ ಜರುಗಿತು. 
ಬೆಳಗ್ಗೆ ನೀಲಕಂಠೇಶ್ವರ ದೇವರ ಮೂರ್ತಿಗೆ ಹೂವಿನ ಅಲಂಕಾರ, ಅಭಿಷೇಕ, ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಲಾಯಿತು. ಪಲ್ಲಕ್ಕಿ ಉತ್ಸವ ಹಾಗೂ ನೀಲಕಂಠೇಶ್ವರ ಭಾವಚಿತ್ರದ ಮೆರವಣಿಗೆ ವಾದ್ಯಮೇಳ, ಮಹಿಳೆಯರ ಕಳಸ ಕನ್ನಡಿಯೊಂದಿಗೆ ವಿಜೃಂಭಣೆಯಿಂದ ನಡೆಸಲಾಯಿತು. ಸಂಜೆ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು ನೀಲಕಂಠಶ್ವರ ಸಭಾ ಭವನದಲ್ಲಿ ಭಕ್ತರಿಗೆ ಆಶೀವರ್ಚನ ನೀಡಿದರು. ನಂತರ ದೇವಸ್ಥಾನ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 
ಕುರುಹಿನ ಶೆಟ್ಟಿ ಸಮಾಜದ ತಾಲೂಕು ಅಧ್ಯಕ್ಷ ಈಶಪ್ಪ ಗಂಗಾವತಿ, ಮುಖಂಡರಾದ ಅಮರೇಶ ಜೋತಾನ, ವಿರೂಪಾಕ್ಷಪ್ಪ ಪರಕಾಳಿ, ಬಸವರಾಜಪ್ಪ ಕಲ್ಲೂರು, ಡಾ.ಪಂಪಣ್ಣ ಮಾನ್ವಿ, ಶಿವರಾಜ ಕೆಂಭಾವಿ, ವೀರೇಶ ಜಾಲಿಹಾಳ, ರಾಚಪ್ಪ ಜೋತಾನ, ಶಿವಕುಮಾರ ಬಾಗೋಡಿ, ರಾಜಶೇಖರ ಗಡದ, ಸಂದೀಪ್ ದಿನ್ನಿ, ಶಿವಪ್ರಸಾದ ಜೋತಾನ್, ಸಂಗಮೇಶ ಇತರರಿದ್ದರು.